Select Your Language

Notifications

webdunia
webdunia
webdunia
webdunia

ಸುಸಜ್ಜಿತ ಆಂಬುಲೆನ್ಸ್‌ನನ್ನು ಕಾವೇರಿ ಆಸ್ಪತ್ರೆಗೆ ಹಸ್ತಾಂತರಿಸಿದ ಎಲ್ಸಿಯಾ ಟ್ರಸ್ಟ್‌

ಸುಸಜ್ಜಿತ ಆಂಬುಲೆನ್ಸ್‌ನನ್ನು ಕಾವೇರಿ ಆಸ್ಪತ್ರೆಗೆ ಹಸ್ತಾಂತರಿಸಿದ ಎಲ್ಸಿಯಾ ಟ್ರಸ್ಟ್‌
bangalore , ಮಂಗಳವಾರ, 9 ನವೆಂಬರ್ 2021 (21:20 IST)
hospitalಬೆಂಗಳೂರು: ಬಡವರಿಗೆ ಉಚಿತ ಸೇವೆ ನೀಡುವ ಉದ್ದೇಶದಿಂದ ಎಲೆಕ್ಟ್ರಾನಿಕ್  ಸಿಟಿ ಇಂಡಸ್ಟ್ರೀಸ್  ಅಸೋಸಿಯೇಷನ್ (ಎಲ್ಸಿಯಾ) ಟ್ರಸ್ಟ್ ಕಾವೇರಿ ಆಸ್ಪತ್ರೆಗೆ ಉಚಿತವಾಗಿ ಅತ್ಯಾಧುನಿಕ ಆಂಬುಲೆಸ್‌ನನ್ನು ಹಸ್ತಾಂತರಿಸಿದೆ. 
 
ಐಟಿ-ಬಿಟಿ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ನೂತನ ಆಂಬುಲೆನ್ಸ್‌ಗೆ ಚಾಲನೆ ನೀಡಿದರು.  
ಹೆವ್ಲೆಟ್ ಪ್ಯಾಕರ್ಡ್ (ಇಂಡಿಯಾ) ಸಾಫ್ಟ್‌ವೇರ್‌ ಆಪರೇಷನ್ ಸಂಸ್ಥೆಯು (ಎಪಿಇ) ಈ ಆಂಬುಲೆನ್ಸ್‌ನನ್ನು ಎಲ್ಸಿಯಾಗೆ ಕೊಡುಗೆಯಾಗಿ ನೀಡಿತ್ತು. ಇದರ ಪ್ರಯೋಜನ ಬಡ ಜನರಿಗೆ ಸಿಗಬೇಕೆಂಬ ಉದ್ದೇಶದಿಂದ ಎಲ್ಸಿಯಾ ಟ್ರಸ್ಟ್ ಈ ಆಂಬುಲೆನ್ಸ್‌ನನ್ನು ಇಂದು ಕಾವೇರಿ ಆಸ್ಪತ್ರೆಗೆ ಹಸ್ತಾಂತರಿಸಿದೆ. 
ಈ ಕುರಿತು ಮಾತನಾಡಿದ ಕಾವೇರಿ ಆಸ್ಪತ್ರೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಜಯ ಭಾಸ್ಕರನ್, ನಗರದಲ್ಲಿ ಎಷ್ಟೇ ಆಂಬುಲೆನ್ಸ‌ಗಳಿದ್ದರು ಆಂಬುಲೆನ್ಸ್‌ಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಕೆಲವೊಮ್ಮೆ ಆಂಬುಲೆನ್ಸ್ ತಡವಾಗಿ ಬರುವುದರಿಂದ ರೋಗಿಯು ತಡವಾಗಿ ಆಸ್ಪತ್ರೆ ಸೇರುವ ಪರಿಸ್ಥಿತಿ ಇದೆ. ಕೆಲವೊಮ್ಮೆ ಪ್ರಾಣಕ್ಕೂ ಕುತ್ತಾಗುವ ಪರಿಸ್ಥಿತಿಯನ್ನು ನೋಡಿದ್ದೇವೆ. ಹೀಗಾಗಿ ಆಂಬುಲೆನ್ಸ್‌ನ  ಸಂಖ್ಯೆ ಹೆಚ್ಚಳವಾಗುವುದರಿಂದ ಶೀಘ್ರವಾಗಿ ಜನರಿಗೆ ಆಂಬುಲೆನ್ಸ್‌ ಲಭ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು. 
 
ಆಂಬುಲೆನ್ಸ್‌ನಲ್ಲಿ ಏನೇನಿದೆ?
ಇದೀಗ ಕಾವೇರಿ ಆಸ್ಪತ್ರೆಗೆ ಹಸ್ತಾಂತರಿಸಿರುವ ಈ ಆಂಬುಲೆನ್ಸ್ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ. ಇದರಲ್ಲಿ ಕಾರ್ಡಿಯಾಕ್ ಅಟ್ಯಾಕ್ ಆದವರನ್ನು ಆಂಬುಲೆನ್ಸ್‌ನಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿ ಕರೆದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ, ಆಕ್ಸಿಜನ್ ಸಿಲೆಂಡರ್ ಸೇರಿದಂತೆ ಮೊಬೈಲ್ ಐಸಿಯೂ ಮಾದರಿಯ ಎಲ್ಲಾ ರೀತಿ ತಂತ್ರಜ್ಞಾವನ್ನು ಸಹ ಇದರಲ್ಲಿ ಅಳವಿಡಿಸಿರುವುದು ವಿಶೇಷ. 
 
ಎಚ್‌ಪಿಇನ ರಾಜೇಶ್ ಧರ್ ಮಾತನಾಡಿ, ಆಂಬುಲೆನ್ಸ್ ವೈಶಿಷ್ಯತೆಗಳನ್ನು ವಿವರಿಸಿದರು. ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಜನರಿಗೆ ಉಚಿತವಾಗಿ ಈ ಆಂಬುಲೆನ್ಸ್ ಸೇವೆ ಸಲ್ಲಿಸಲಿದೆ, ಇದರ ಪ್ರಯೋಜನವನ್ನು ಇಲ್ಲಿನ ಜನರು ಪಡೆದುಕೊಳ್ಳಬಹುದು. ಇದಕ್ಕಾಗಿ ಕಾವೇರಿ ಆಸ್ಪತ್ರೆ ಹೆಲ್ಪ್‌ಲೈನ್ ಮೂಲಕ ಸಂಪರ್ಕಿಸಬಹುದು ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ಎಚ್‌ಪಿಇನ ಸೀತಾರಾಮ್ ಮತ್ತಿತರರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಯನಿರತ ಪತ್ರಕರ್ತರ ಸಂಘದ ಕಳ್ಳಾಟಕ್ಕೆ ಬಿತ್ತು ಬ್ರೇಕ್!