ಒಳ ಮೀಸಲಾತಿಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಮಾದಿಗ ಸಮುದಾಯದವರು ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.ಸಾವಿರಾರು ಸಂಖ್ಯೆಯಲ್ಲಿ ಕಾಲ್ನಡಿಗೆ ಬಂದ ಪ್ರತಿಭಟನಾಕಾರರಿಂದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.ದಾವಣಗೆರೆ, ಹರಿಹರದಿಂದ ಪ್ರೋ.ಬಿ. ಕೃಷ್ಣಪ್ಪರವರ ಸಮಾಧಿಯಿಂದ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನಾಕಾರರು ಫ್ರೀಡಂ ಪಾರ್ಕ್ ತಲುಪಿದಾರೆ.
ಪ್ರತಿಭಟನಾಕಾರರು ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರವು ಕೂಡಲೇ ಕೇಂದ್ರ ಸರ್ಕಾರ ಶಿಫಾರಸ್ಸು ಮಾಡುವುದು.ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ಉಪಯೋಗಿಸಿ ಪ್ರತ್ಯೇಕವಾಗಿ ಮಾದಿಗ- ಮಾದಿಗ ಸಂಬಂಧಿತ ಜಾತಿಗಳಿಗೆ ಶೇ6% ಮೀಸಲಾತಿಯನ್ನು ಮತ್ತು ಕಳೆದ ತಿಂಗಳು ನೀಡಿದಂತಹ ಶೇ 2%ಗೆ ಹೆಚ್ಚುವರಿ ಮೀಸಲಾತಿಯನ್ನು ನೀಡಿ ಮಸೂದೆಯನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡುವುದು.ಹಿಂದುಳಿದ ವರ್ಗಗಳ ಕಾಂತರಾಜು ವರದಿಯನ್ನು ಬಹಿರಂಗಮಾಡಿ ಯತ್ತವತ್ತಾಗಿ ಜಾರಿ ಮಾಡಬೇಕು.ಕರ್ನಾಟಕ ರಾಜ್ಯದಲ್ಲಿರುವ 43 ಸಾವಿರ ಪೌರಕಾರ್ಮಿಕರು ಮತ್ತು ವಾಹನ ಚಾಲಕರನ್ನ ಕಾಯಂಗೊಳಿಸುವುದು.ಪರಿಶಿಷ್ಟ ಜಾತಿಗಳ ಎಸ್ಸಿಪಿ/ಟಿಎಸ್ಸಿಪಿ ಅನುದಾನವನ್ನು ಮಾದಿಗ-ಮಾದಿಗ ಸಬಂಧಿತ ಅಲೆಮಾರಿ ಸಮುದಾಯಗಳಿಗೆ ಶೇ 6+1ರಂತೆ ಹಂಚಿಕೆ ಮಾಡಬೇಕು. ಕರ್ನಾಟಕ ಪೌರ ಕಾರ್ಮಿಕರು ಪಡೆದಿರುವ ಸಾಲ ಮನ್ನಾ ಮಾಡಬೇಕು ಮತ್ತು ಇತರೆ ಬೇಡಿಕೆಗಳನ್ನಿಟ್ಟು ಸಮಾವೇಶ ಮಾಡುತ್ತಿದ್ದಾರೆ.