Publish Date: Sun, 11 Dec 2022 (11:45 IST)
Updated Date: Sun, 11 Dec 2022 (11:47 IST)
ದಾವಣಗೆರೆ : 10 ತಿಂಗಳ ಮಗು ಮನೆ ಮುಂಭಾಗ ಆಟವಾಡುತ್ತಿದ್ದಾಗ ನೀರು ತುಂಬಿದ ಬಕೆಟ್ಗೆ ಬಿದ್ದು ಸಾವನ್ನಪ್ಪಿದ ಮನಕಲುಕುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಂಜುನಾಥ್ ಹಾಗೂ ತಾರ ದಂಪತಿಯ 10 ತಿಂಗಳ ಮಗು ಅನುಶ್ರಾವ್ಯ ಮೃತ ಕಂದಮ್ಮ. ಎಂದಿನಂತೆ ಮಗು ಮನೆಯ ಮುಂಭಾಗ ಆಟವಾಡುತ್ತಿದ್ದಾಗ ದುರ್ಘಟನೆ ನಡೆದಿದೆ.
ಮಗು ಆಟವಾಡುತ್ತಿದ್ದಾಗ ನೀರು ತುಂಬಿದ ಬಕೆಟ್ಗೆ ಆಯಾತಪ್ಪಿ ಬಿದ್ದಿದೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಮಗುವಿನ ಪೋಷಕರು ಇದನ್ನು ನೋಡಿದ್ದಾರೆ. ತಕ್ಷಣ ಮಗುವನ್ನು ಜಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಗು ಮಾರ್ಗಮಧ್ಯೆಯೇ ಸಾವನ್ನಪ್ಪಿದೆ.