Select Your Language

Notifications

webdunia
webdunia
webdunia
webdunia

ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ , ಗುರುವಾರ, 15 ಡಿಸೆಂಬರ್ 2022 (13:43 IST)
ನವದೆಹಲಿ : ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದಂತೆ ಹೊಸ ಎಫ್ಐಆರ್ಗಳ ನೋಂದಣಿ, ಮರು ತನಿಖೆ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿ ಕೋರಿ ಸಲ್ಲಿಸಿದ್ದ ಕ್ಯೂರೆಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ನ ಸಿಜೆಐ ಪೀಠ ವಜಾಗೊಳಿಸಿದೆ.

ಕಾಶ್ಮೀರಿ ಪಂಡಿತರ ನ್ಯಾಯ ಮತ್ತು ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯಾದ ‘ರೂಟ್ಸ್ ಇನ್ ಕಾಶ್ಮೀರ’ 2017 ರಲ್ಲಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಡಿವೈ ಚಂದ್ರಚೂಡ್ ವಜಾ ಮಾಡಿದರು.

ಘಟನೆ ಸಂಭವಿಸಿದ ದಿನಾಂಕದಿಂದ ಇಲ್ಲಿಗೆ 27 ವರ್ಷಗಳು ಕಳೆದಿರುವುದರಿಂದ ತನಿಖೆಯ ಮೂಲಕ ಯಾವುದೇ ಫಲಪ್ರದ ಫಲಿತಾಂಶ ಹೊರಹೊಮ್ಮುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ಜೆಎಸ್ ಖೇಹರ್ ನೇತೃತ್ವದ ಪೀಠ 2017ರಲ್ಲಿ ಈ ಅರ್ಜಿಯನ್ನು ವಜಾ ಮಾಡಿತ್ತು.

ಇದೇ ಅಂಶಗಳನ್ನು ಉಲ್ಲೇಖಿಸಿದ ಸಿಜೆಐ ಡಿವೈ ಚಂದ್ರಚೂಡ್ ಅರ್ಜಿಯನ್ನು ವಜಾಗೊಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜನನ ಪ್ರಮಾಣ ಗಣನೀಯವಾಗಿ ಇಳಿಮುಖ