Publish Date: Fri, 29 Dec 2017 (18:07 IST)
Updated Date: Fri, 29 Dec 2017 (18:09 IST)
ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ದಲಿತರ ಪರ ಹೋರಾಟಗಾರ, ಗುಜರಾತಿನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಘೋಷಿಸಿದ್ದಾರೆ.
ಚಿಕ್ಕಮಗಳೂರಿನ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ಕಾರ್ಯಕ್ರಮಕ್ಕೆ ಬಂದಿರುವ ಅವರು ಮಾತನಾಡಿ, ನನ್ನ ಹೋರಾಟ ದಲಿತ ಹಾಗೂ ಕೆಳಹಂತದ ಜನರ ಪರವಾಗಿರುತ್ತದೆ. ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ಗೌರಿಲಂಕೇಶ್ ಅವರೊಂದಿಗಿನ ಪರಿಚಯದ ಬಗ್ಗೆ ಪ್ರಸ್ತಾಪಿಸಿ ದಬ್ಬಾಳಿಕೆ ಹಾಗೂ ಕೋಮುವಾದ ಮಾಡುತ್ತಿರುವವರ ವಿರುದ್ಧವಾಗಿ ಹೋರಾಟ ನಡೆಸಲಾಗುವುದು. ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದು, ಕರ್ನಾಟಕ ಹಾಗೂ ಕೇರಳಲ್ಲಿರುವವರು ಹಲವು ಜವಾಬ್ದಾರಿಗಳನ್ನು ನನಗೆ ನೀಡಿದ್ದಾರೆ. 2018ರ ವಿಧಾನ ಸಭಾ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತೇನೆ. ಆದರೆ ಯಾವುದೇ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.