Select Your Language

Notifications

webdunia
webdunia
webdunia
webdunia

" ಜೈ ಶ್ರೀರಾಮ್ " ಎಂದು ಘೋಷಣೆ

bangalore , ಗುರುವಾರ, 10 ಮಾರ್ಚ್ 2022 (16:21 IST)
ವಿಧಾನಸಭೆಯಲ್ಲಿ ಕಲಾಪ ಆರಂಭ ಆಗುತ್ತಿದ್ದಂತೆಯೇ ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರತಿಧ್ವನಿಸಿದೆ. ಕಲಾಪದಲ್ಲಿ ವಿಪಕ್ಷ ಉಪನಾಯಕ ಯು.ಟಿ ಖಾದರ್ ಅವರು ಎದ್ದು ನಿಂತು ಮಾತನಾಡಲು ಮುಂದಾದ ವೇಳೆ "ಖಾದರ್ ಅವರೇ ಕಾಂಗ್ರೆಸ್ ಕಥೆ ಮುಗೀತಲ್ಲಾ, ಜೈ ಶ್ರೀರಾಮ್" ಎಂದು ಬಿಜೆಪಿ ಸದಸ್ಯರು ಹೇಳಿದ ಘಟನೆ ನಡೆದಿದೆ.
ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಲು ಮುಂದಾದರು. ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಈಶ್ವರಪ್ಪ ಅಂತೂ ಸಿಎಂ ಆಗಲ್ಲ, ಯಾಕೆ ಇಷ್ಟು ಮಾತನಾಡುತ್ತಾರೋ ಎಂದರು. ಈ ವೇಳೆ ಸದನದಲ್ಲಿ 'ಜೈ ಹನುಮಾನ್' ಎಂಬ ಘೋಷಣೆ ಕೂಡಾ ಕೇಳಿ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಗೆ ಹೆಜ್ಜೇನು ದಾಳಿ