Select Your Language

Notifications

webdunia
webdunia
webdunia
webdunia

ಸಿದ್ದು ಹೆಚ್. ಡಿ. ಕೆ. ಮೀಟಿಂಗ್

ಸಿದ್ದು ಹೆಚ್. ಡಿ. ಕೆ. ಮೀಟಿಂಗ್
ಬೆಂಗಳೂರು , ಗುರುವಾರ, 10 ಮಾರ್ಚ್ 2022 (16:09 IST)
ವಿಷಯಾಂತರ ಮಾಡಿ ರಾಜಕೀಯ ಭಾಷಣ ಮಾಡಬಹುದಾದರೆ ನಾನು 10 ದಿನ ಮಾತನಾಡಬಲ್ಲೆ‌ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲೆಸೆದರೆ, ಬಜೆಟ್​ಗೆ ಸಂಬಂಧಿಸಿದ ವಿಷಯವೇ ಪ್ರಸ್ತಾಪಿಸಿರುವೆ. ರಾಜಕೀಯ ಭಾಷಣ ಮಾಡುವುದಾದರೆ ನಾನೂ ಒಂದು ವರ್ಷ ಮಾತನಾಡಬಲ್ಲೆ ಎಂದು ಮಾಜಿ ಸಿಎಂ, ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಪ್ರತಿ ಸವಾಲು ಹಾಕಿದರು.
 
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಮುಂದುವರಿಸಿದ ಎಚ್.ಡಿ.ಕುಮಾರಸ್ವಾಮಿ, ಈಗಲ್ ಟನ್ ಜಮೀನು ವಿವಾದ ಪ್ರಸ್ತಾಪಿಸಿ, ಪರೋಕ್ಷವಾಗಿ ಕಾಂಗ್ರೆಸ್ ಆಡಳಿತಾವಧಿಯ ಲೋಪ- ದೋಷಗಳನ್ನು ಪ್ರಸ್ತಾಪಿಸಿದರು. ಪರ್ಸೆಂಟೇಜ್, ಅಕ್ರಮಗಳು ನಡೆದಿವೆ.
ಬಜೆಟ್ ಗೆ ಸಂಬಂಧಪಡದ ವಿಷಯವೆಂದ ಸಿದ್ದರಾಮಯ್ಯ ನೀವು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಕ್ರಮವಹಿಸಬಹುದಿತ್ತು. ಈಗ ನಾವಂತೂ ಅಧಿಕಾರದಲ್ಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ‌ ಅವರು ಯಾವುದೇ ರೀತಿಯ ತನಿಖೆ ನಡೆಸಲಿ. ತಪ್ಪುಗಳು ದೃಢಪಟ್ಟರೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಲಿ ಎಂದರು.,
 
ಈ ಮಧ್ಯೆ ಎಚ್ ಡಿಕೆ ವಿರುದ್ಧ ಏರಿದ ಧ್ವನಿಯಲ್ಲಿ ರಾಜಕೀಯ ಭಾಷಣ ಮಾಡುತ್ತಿದ್ದಾರೆ‌ ಸಿದ್ದರಾಮಯ್ಯ ಹರಿಹಾಯ್ದರೆ, ದಾಖಲೆ ಸಹಿತ ನಿಜಾಂಶ ಮಾತನಾಡಿದರೆ‌ ಸಿಟ್ಟು ಬರುತ್ತದೆ ಎಂದು ಕುಮಾರಸ್ವಾಮಿ ತಿವಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಗೃಹ ಕಚೇರಿ ಕೃಷ್ಣ ಬೊಮ್ಮಾಯಿ