Publish Date: Wed, 09 Mar 2022 (17:51 IST)
Updated Date: Wed, 09 Mar 2022 (17:54 IST)
ಉಕ್ರೇನ್ ನಿಂದ ಮರಳಿದ ಮಲ್ಲೇಶ್ವರದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕ್ಷೇತ್ರದ ಶಾಸಕ ಹಾಗೂ ಸಚಿವ ಅಶ್ವಥ್ ನಾರಾಯಣ್ ಭೇಟಿ ಮಾಡಿದ್ದಾರೆ. ಭೇಟಿ ವೇಳೆ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಸಚಿವರು ಧೈರ್ಯ ತುಂಬಿದ್ದಾರೆ. ಬಳಿಕ ಮಾತನಾಡಿದ ಸಚಿವರು, ಸುರಕ್ಷಿತವಾಗಿ ಕ್ಷೇತ್ರದ ಮಕ್ಕಳು ವಾಪಸ್ ಆಗಿರುವುದು ಖುಷಿಯ ವಿಚಾರ.
ಉಕ್ರೇನ್ ನಲ್ಲಿ ಸಿಕ್ಕಿಬಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ಕರೆ ತರುವ ಪ್ರಯತ್ನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು. ಇದೇ ಸಂದರ್ಭದಲ್ಲಿ ಪದಾಧಿಕಾರಿಗಳು, ಸ್ಥಳೀಯರು, ವಿದ್ಯಾರ್ಥಿಗಳ ಕುಟುಂಬ ಉಪಸ್ಥಿತರಿದ್ದರು