Publish Date: Tue, 08 Mar 2022 (16:15 IST)
Updated Date: Tue, 08 Mar 2022 (16:18 IST)
ಲಿಂಗ ಸಮಾನತೆ ರೂಪಿಸುವಲ್ಲಿ ನಮ್ಮ ನಿಮ್ಮೆಲ್ಲರ ಪ್ರಮುಖ ಪಾತ್ರವಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಹೇಳಿದ್ದಾರೆ. ಇಂದು ಬೆಳಗ್ಗೆ ಸದನ ಸಮಾವೇಶಗೊಂಡ ಕೂಡಲೇ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ ಅವರು, ವಿಶ್ವಸಂಸ್ಥೆಯು 2022ನೇ ಸಾಲಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ ಎಂಬ ಧ್ಯೇಯ ವಾಖ್ಯವನ್ನು ಘೋಷಿಸಿದೆ ಎಂದರು.
ಪ್ರಕೃತಿಯ ವಿಶೇಷ ಸೃಷ್ಟಿ, ಬದ್ಧತೆ, ಏಕಾಗ್ರತೆ ಹಾಗೂ ಧೈರ್ಯದ ಪ್ರತೀಕವೇ ಮಹಿಳೆ. ಸಾಕಷ್ಟು ಕಷ್ಟ, ನಷ್ಟಗಳನ್ನು ಎದುರಿಸಿ ಸಮಾಜದಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತಿರುವ ಭರವಸೆಯ ಬೆಳಕು ಮಹಿಳೆ ಎಂದು ಸ್ಪೀಕರ್ ಕಾಗೇರಿ ಶ್ಲಾಘಿಸಿದರು.