Publish Date: Wed, 16 May 2018 (09:03 IST)
Updated Date: Wed, 16 May 2018 (09:05 IST)
ಬೆಂಗಳೂರು: ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಗ್ಗೇಶ್ ಸೋತು ಸುಣ್ಣವಾಗಿದ್ದಾರೆ. ಈಗ ತಮ್ಮ ಸೋಲಿನ ವಿಶ್ಲೇಷಣೆ ಮಾಡಿಕೊಂಡಿದ್ದಾರೆ.
ತಾವು ಸೋತ ಸುದ್ದಿ ಕೇಳಿದ ತಕ್ಷಣ ನಾನು 15 ದಿನದ ಅಭ್ಯರ್ಥಿ ಎನ್ನುವ ಮೂಲಕ ಕಡೇ ಕ್ಷಣದಲ್ಲಿ ತನಗೆ ಪ್ರಚಾರ ಮಾಡಲು ಸಾಕಷ್ಟು ಅವಕಾಶ ಸಿಗಲಿಲ್ಲ ಎಂಬುದನ್ನು ಜಗ್ಗೇಶ್ ಹೇಳಿಕೊಂಡಿದ್ದರು.
ಮತ್ತೆ ಟ್ವೀಟ್ ಮಾಡಿದ ಜಗ್ಗೇಶ್ ‘ಹಣ ಹೆಂಡ ಹಂಚದೆ ಕಲಾವಿದನೆಂಬ ಪ್ರೀತಿಯಿಂದ ಜನ ನನಗೆ ನೀಡಿದ ವೋಟ್. ನನ್ನ ಅಭಿಮಾನ ಗೆದ್ದಿದೆ. 3 ತಿಂಗಳ ಹಿಂದೆ ಅಖಾಡಕ್ಕೆ ಇಳಿದಿದ್ದರೆ ಚಿತ್ರಣವೇ ಬೇರೆ ಆಗ್ತಿತ್ತು.ಆದರೂ ಹೆಮ್ಮೆಯಿದೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.