Select Your Language

Notifications

webdunia
webdunia
webdunia
webdunia

ಟ್ವೀಟರ್ ನಲ್ಲಿ ತಮ್ಮ ಸೋಲಿಗೆ ಕಾರಣ ತಿಳಿಸಿದ ನಟ ಜಗ್ಗೇಶ್

ಟ್ವೀಟರ್ ನಲ್ಲಿ ತಮ್ಮ ಸೋಲಿಗೆ ಕಾರಣ ತಿಳಿಸಿದ ನಟ ಜಗ್ಗೇಶ್
ಬೆಂಗಳೂರು , ಬುಧವಾರ, 16 ಮೇ 2018 (07:00 IST)
ಬೆಂಗಳೂರು : ಈ ಬಾರಿ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ ನವರಸ ನಾಯಕ ಜಗ್ಗೇಶ್ ಅವರು ಸೋಲನ್ನು ಅನುಭವಿಸಿದ್ದು, ಇದೀಗ ಟ್ವೀಟರ್ ನಲ್ಲಿ  ತಮ್ಮ ಸೋಲಿಗೆ ಕಾರಣವೆನೆಂಬುದನ್ನು ಹಂಚಿಕೊಂಡಿದ್ದಾರೆ.


 ಈ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್ ಅವರು,’ಇದು ನನ್ನ ಸೋಲಲ್ಲ. ನನ್ನ ಮೇಲಿನ ಅಭಿಮಾನ ಗೆದ್ದಿದೆ. ಮೂರು ತಿಂಗಳ ಮುಂಚೆಯೇ ನನಗೆ ಅವಕಾಶ ನೀಡಿದ್ದರೇ ಅದರ ಚಿತ್ರಣವೇ ಬೇರೆ ಆಗುತ್ತಿತ್ತು. ಕೇವಲ 10 ದಿನದ ಶ್ರಮಕ್ಕೆ ಹಾಗೂ ಹಣಹೆಂಡ ಹಂಚದೆ. ಕಲಾವಿದನೆಂಬ ಅಭಿಮಾನದಿಂದ 52,946 ಮತ ನೀಡಿದ ಯಶವಂತಪುರದ ಮಹನೀಯರಿಗೆ ಧನ್ಯವಾದ’ ಎಂದು ತಿಳಿಸಿದ್ದಾರೆ.


ಕಾಂಗ್ರೆಸ್ ಪಕ್ಷದ ಎಸ್.ಟಿ ಸೋಮಶೇಖರ್ ಸುಮಾರು 1 ಲಕ್ಷ ಮತಗಳನ್ನ ಪಡೆದು ಜಯಶಾಲಿಯಾಗಿದ್ದರೇ, ಜೆಡಿಎಸ್ ಪಕ್ಷದ ಜವರಾಯಿ ಗೌಡ 95 ಸಾವಿರ ಮಗಳನ್ನ ಪಡೆದು ಎರಡನೇ ಸ್ಥಾನ ಹಾಗೂ ಜಗ್ಗೇಶ್ ಅವರು 45 ಸಾವಿರ ಮತಗಳನ್ನು  ಪಡೆದು ಮೂರನೆ ಸ್ಥಾನಕ್ಕಿಳಿದು ಪರಜಯಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಕಿಸಿದವರಿಗೆ ನಟ ಪ್ರಕಾಶ್ ರೈ ನೀಡಿದ ಉತ್ತರವೇನು ಗೊತ್ತಾ…?