Select Your Language

Notifications

webdunia
webdunia
webdunia
Sunday, 6 April 2025
webdunia

ಇಡೀ ದೇಶವೇ ಬಿಜೆಪಿಮಯವಾಗುತ್ತೆ– ಜಗದೀಶ ಶೆಟ್ಟರ್

ಗುಜರಾತ್ ಚುನಾವಣೆ
ಹುಬ್ಬಳ್ಳಿ , ಸೋಮವಾರ, 18 ಡಿಸೆಂಬರ್ 2017 (11:18 IST)
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಇಡೀ ದೇಶವೇ ಬಿಜೆಪಿ ಮಯವಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ನಾವು ಎರಡೂ ರಾಜ್ಯಗಳಲ್ಲಿ ಗೆಲುವಿನತ್ತ ಮುಂದುವರೆದಿದ್ದೇವೆ. ಬಹುಮತ ಕೂಡ ಸಾಧಿಸುತ್ತೇವೆ. ಮೋದಿಯವರ ಸಾಧನೆ ನೋಡಿ ಜನರು ಮನ್ನಣೆ ಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ ತಳಮಳ ಶುರುವಾಗಿದೆ ಎಂದು ತಿಳಿಸಿದ್ದಾರೆ.

ಕೆಲವು ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಇರಬಹುದು. ಮುಂದಿನ ದಿನಗಳಲ್ಲಿ ಅಲ್ಲೂ ಕಮಲ ಅರಳಲಿದೆ. ಈ ಚುನಾವಣೆ ರಾಜ್ಯದ ಮೇಲೆ ಸಾಕಷ್ಟು ಪರಿಣಾಮ ಬಿರುತ್ತೆ ಎಂದಿದ್ದಾರೆ.‌
 
ಜಿಎಸ್ ಟಿ, ನೋಟ್ ಬ್ಯಾನ್ ಗೆ ಜನ ವಿರೋಧಿಸಿಲ್ಲ. ವಿರೋಧಿಸಿದರೆ ಗುಜರಾತ್ ನಲ್ಲಿ ನಮಗೆ ಇಷ್ಟೊಂದು ಸೀಟುಗಳು ಬರುತ್ತಿರಲಿಲ್ಲ. ಮೋದಿ ವಿರುದ್ಧ ಕೆಟ್ಟ ಅಪಪ್ರಚಾರ ಮಾಡಿದರು. ಆದರೂ ಏನು ವರ್ಕೌಟ್ ಆಗಲಿಲ್ಲ. ಎಂದು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ ಭವನದ ಎದುರು ವಿನ್ ಎಂದು ಬೆರಳು ತೋರಿಸಿದ ಪ್ರಧಾನಿ ಮೋದಿ