Select Your Language

Notifications

webdunia
webdunia
webdunia
webdunia

ಇದೆಲ್ಲದಕ್ಕೂ ಇತಿಶ್ರೀ ಹೈಕಮಾಂಡ್ ಮಾಡುತ್ತದೆ: ವಿಜಯೇಂದ್ರ ಕೌಂಟರ್‌ ಕೊಟ್ಟಿದ್ದು ಯಾರಿಗೆ

Karnataka BJP President Post Fight

Sampriya

ಬೆಂಗಳೂರು , ಸೋಮವಾರ, 20 ಜನವರಿ 2025 (16:35 IST)
ಬೆಂಗಳೂರು: ಸದ್ಯ ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಬಿವೈ ವಿಜಯೇಂದ್ರ ಹಾಗೂ ಯತ್ನಾಳ್ ಬಣಗಳ ನಡುವೆ ವಾಕ್ಸಮರ ಜೋರಾಗಿದೆ. ಈ ವಿಚಾರವಾಗಿ ಇಂದು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನ್ನ ವಿರುದ್ಧ ಟಾರ್ಗೆಟ್ ಮಾಡೋರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಕೌಂಟರ್ ಕೊಟ್ಟರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನನ್ನನ್ನು ಟಾರ್ಗೆಟ್ ಮಾಡೋರು ಮಾಡಿಕೊಳ್ಳಲಿ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಕೆಲಸ ಮಾಡಲು ಬಂದಿದ್ದು, ಮಾಡಿಕೊಂಡು ಹೊಗುತ್ತಿದ್ದೇನೆ. ಕೆಲಸ ಇಲ್ಲದೇ ಇರೋರು ಮಾತನಾಡುತ್ತಾರೆ, ಮಾತನಾಡಲಿ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಲೇವಡಿ ಮಾಡಿದರು.

ಯತ್ನಾಳ್ ವಿರುದ್ಧ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಕ್ರಮ ಕೈಗೊಳ್ಳಬೇಕೋ ಅವರು ತೆಗೆದುಕೊಳ್ಳುತ್ತಾರೆ. ಫೆಬ್ರವರಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಇದೆ. ಪಕ್ಷದ ಇವತ್ತಿನ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರ ನೋವು ಇದೆ. ಆ ನೋವು ಏನು ಎಂದು ಅರ್ಥ ಆಗುತ್ತೆ. ಇದೆಲ್ಲದಕ್ಕೂ ಇತಿಶ್ರೀ ಹಾಡೋ ಕೆಲಸ ಹೈಕಮಾಂಡ್ ಮಾಡುತ್ತದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಮೊನಾಲಿಸಾಗೆ ಹೀಗೆ ಆಗಬಾರದಿತ್ತು