Select Your Language

Notifications

webdunia
webdunia
webdunia
webdunia

ಮಠಾಧೀಶರಾಗಿ ಸಿಎಂಗೆ ಮನವಿ ಮಾಡೋದು ನಮ್ಮ ಕರ್ತವ್ಯ- ಬಸವ ಜಯಮೃತ್ಯುಂಜಯಶ್ರೀ ಸ್ಪಷ್ಟನೆ

ಮಠಾಧೀಶರಾಗಿ ಸಿಎಂಗೆ ಮನವಿ ಮಾಡೋದು ನಮ್ಮ ಕರ್ತವ್ಯ- ಬಸವ ಜಯಮೃತ್ಯುಂಜಯಶ್ರೀ  ಸ್ಪಷ್ಟನೆ
ಬಾಗಲಕೋಟೆ , ಗುರುವಾರ, 16 ಜನವರಿ 2020 (10:19 IST)
ಬಾಗಲಕೋಟೆ : ಸಚಿವ ಸ್ಥಾನ ಕೊಡುವಂತೆ ವಚನಾನಂದ ಶ್ರೀಗಳು ಸಿಎಂ ಗೆ ಒತ್ತಡ ಹೇರಿದ ವಿಚಾರದ ಬಗ್ಗೆ ರಾಜ್ಯದಲ್ಲಿ ಭಾರೀ ಪರ, ವಿರೋಧ ಚರ್ಚೆಯಾಗುತ್ತಿದೆ.



ಇದೀಗ ಈ ಬಗ್ಗೆ ಮಾತನಾಡಿದ ಕೂಡಲಸಂಗಮ ಮಠದ ಬಸವಜಯಮೃತ್ಯುಂಜಯಶ್ರೀ,  ಮಠಾಧೀಶರಾಗಿ ಸಿಎಂಗೆ ಮನವಿ ಮಾಡೋದು ನಮ್ಮ ಕರ್ತವ್ಯ. ಸಮಾಜದ ದನಿಯಾಗಿ ಸಲಹೆ ನೀಡುವುದು ನಮ್ಮ ಕರ್ತವ್ಯ. ಕೆಲವೊಂದು ಬಾರಿ ಮಾತಾಡುವ ಶೈಲಿಯಲ್ಲಿ ವ್ಯತ್ಯಾಸವಾಗುತ್ತೆ. ಯಾರೂ ಗೊಂದಲ ಮಾಡಿಕೊಳ‍್ಳಬಾರದೆಂಬುದು ಮನವಿ ಮಾಡಿದ್ದಾರೆ.


ಅಲ್ಲದೇ ಸಮುದಾಯಕ್ಕೆ ಮಂತ್ರಿಗಿರಿ ನೀಡಲೇಂಬುದು ನಮ್ಮ ಅಭಿಪ್ರಾಯ, ಮುರುಗೇಶ್ ನಿರಾಣಿಯವರಿಗೆ ಸಚಿವ ಸ್ಥಾನ ಕೊಡಬೇಕು. ಇದು ಕೇವಲ ನಮ್ಮ ಪಂಚಮಸಾಲಿ ಪೀಠದ ಬಯಕೆಯಲ್ಲ. ಇದು ನಮ್ಮ ಸಮುದಾಯದವರ ಬಯಕೆಯಾಗಿದೆ. ಈ ಹಿಂದೆಯೂ ಹೇಳಿದ್ದೇವೆ. ಈಗಲೂ ಮನವಿ ಮಾಡ್ತೇವೆ. ವಚನಾನಂದ ಶ್ರೀಗಳ ಮಾತಿನ ಶೈಲಿಯಲ್ಲಿ ವ್ಯತ್ಯಾಸ ಆಗಿರಬಹುದು ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ವಿಜಯಪುರ ಜಿಲ್ಲಾ ಪ್ರವಾಸ ರದ್ದು ಮಾಡಿದ ಸಿಎಂ