Webdunia - Bharat's app for daily news and videos

Install App

ಕಾವೇರಿ ನೀರಿನ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಿ:ಸಿಎಂಗೆ ಶೋಭಾ ಕರಂದ್ಲಾಜೆ ಒತ್ತಾಯ

Webdunia
ಶುಕ್ರವಾರ, 25 ಆಗಸ್ಟ್ 2023 (18:31 IST)
ಕಾವೇರಿಯಲ್ಲಿ ಎಷ್ಟು ನೀರು ಇದೆ ಎಷ್ಟು ನೀರು ಈ ಬಾರಿ ಬಂದಿದೆ, ನಮ್ಮ ಜಲಾಶಯದಲ್ಲಿ ಎಷ್ಟು ನೀರು ತುಂಬಿದೆ ನಮಗೆ ಕುಡಿಯಲು ಎಷ್ಟು ನೀರು ಬೇಕು ಎಂದು ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು, ಮಂಡ್ಯ, ಬೆಂಗಳೂರು ಭಾಗದಲ್ಲಿ ಕುಡಿಯುವ ನೀರಿಗೆ ಕಾವೇರಿ ನದಿಯ ನೀರನ್ನೇ ಅವಲಂಬಿಸಿದ್ದಾರೆ ಈ ವರ್ಷ ನಮ್ಮ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ, ಹೀಗಾಗಿ ಕೆ ಆರ್ ಎಸ್ ಭರ್ತಿಯಾಗಿಲ್ಲ ಆದರೂ ಕೂಡ ರಾಜ್ಯ ಸರ್ಕಾರ ತಮಿಳುನಾಡಿನ ಕುರುವೈ ಬೆಳಗ್ಗೆ ನೀರು ಬಿಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
 
ಕಳೆದ ಬಾರಿ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಬಿಡಲಾಗಿತ್ತು ತಮಿಳುನಾಡಿನ ಜಲಾಶಯದಲ್ಲಿ ನೀರು ಇದೆ, ತಮಿಳುನಾಡಿಗೆ ಕುಡಿಯಲು ನೀರು ಬಿಡುವುದಕ್ಕೆ ನಮ್ಮ ಅಭ್ಯಂತರವಿಲ್ಲ ಅವರಿಗೆ ನೀರು ಕೊಡದಿರಲು ನಾವೇನು ಭಾರತ ಪಾಕಿಸ್ತಾನದಂತೆ ವೈರಿಗಳಲ್ಲ, ನೆರೆಹೊರೆ ರಾಜ್ಯಗಳು ನಮ್ಮ ಅಣ್ಣ ತಮ್ಮಂದಿರ ರೀತಿ ಆದರೆ  ಬೆಂಗಳೂರಿನಲ್ಲಿ ಕುಡಿಯುವ ನೀರು ಸರಬರಾಜಿಗೂ ನೀರು ಕೊರತೆಯಾಗುವ ಸಾಧ್ಯತೆ ಇದೆ ಇಂತಹ ಸಂದರ್ಭದಲ್ಲಿ ಐಎನ್‌ಡಿಐಎ ನಾಯಕರನ್ನ ತೃಪ್ತಿಪಡಿಸಲು ಕರ್ನಾಟಕ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರನ್ನು ಹರಿಸುತ್ತಿದೆ, ಮಳೆ ಬಂದಿಲ್ಲ ಎನ್ನುವುದು ಗೊತ್ತು, ನೀರು ಸಂಗ್ರಹವಾಗಿಲ್ಲ ಎನ್ನುವುದೂ ಗೊತ್ತು ನೀರು ಬಿಡುವ ಹಾಗೂ ಬಿಡದೆ ಇರುವ ಅಧಿಕಾರ ನಿಮ್ಮ ಕೈಯಲ್ಲಿಯೇ ಇದೆ ಆದರೂ ಇದರ ಮಧ್ಯ ನೀವು ಪ್ರಧಾನಿಯನ್ನು ಹೇಗೆ ಎಳೆದು ತರುತ್ತಿದ್ದೀರಿ,

ನೀರು ಇದ್ದರೆ ಪ್ರಧಾನಿ ಮಧ್ಯ ಪ್ರವೇಶ ಮಾಡಿ ನೀರು ಬಿಡಿ ಎನ್ನಬಹುದು ಆದರೆ ಈಗ ನೀರಿಲ್ಲ ಏನೂ ಮಾಡಬೇಕು? ಅನಾವಶ್ಯಕವಾಗಿ ಸಿದ್ದರಾಮಯ್ಯ ಮೋದಿ ಅವರನ್ನು ಈ ವಿಚಾರದಲ್ಲಿ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ,ತಮಿಳುನಾಡನ್ನು ಒಪ್ಪಿಸುವ ಜವಾಬ್ದಾರಿ ನಿಮ್ಮದಾಗಿತ್ತು ನಿಮ್ಮ ಕೂಟದ ಸದಸ್ಯರು ಡಿಎಂಕೆ ನಾಯಕರು, ಕರ್ನಾಟಕ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಮೇಲ್ಬಾಗದ ನೀರು ಕೆಳಗಡೆ ಹೋದ ನಂತರ ವಾಪಸ್ ತರಲು ಸಾಧ್ಯವಿಲ್ಲ ಮೇಲ್ಭಾಗದಲ್ಲಿಯೇ ಇದ್ದರೆ ಕೆಳಭಾಗಕ್ಕೆ ಯಾವಾಗ ಬೇಕಾದರೂ ಬಿಡಬಹುದು, ಕುಡಿಯುವುದನ್ನು ಸಮಸ್ಯೆ ಆದಾಗ ನೀರು ಬಿಡಬಹುದು ಇದಕ್ಕೆ ನಾವು ವಿರೋಧ ಮಾಡುವುದಿಲ್ಲ ಎಂದು ಡಿಎಂಕೆ ನಾಯಕರಿಗೆ ಹೇಳಬಹುದಿತ್ತು ಆದರೆ ಅದರ ಬದಲು ರಾಜಕೀಯ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಕ್ಷುಲ್ಲಕ ರಾಜಕಾರಣ, ಇಂತಹ ವೋಟ್ ಬ್ಯಾಂಕ್ ರಾಜಕಾರಣ ಕೈಬಿಡಿ, ನಮ್ಮ ಜನಕ್ಕೆ ನೀರು ಕೊಡಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ ಎನ್ನುವುದಷ್ಟೇ ಅಷ್ಟೇ ನನ್ನ ಮನವಿ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments