Select Your Language

Notifications

webdunia
webdunia
webdunia
webdunia

ಲೋಕ ಗೆಲ್ಲಲು ಸಮರ ಸಾರಿದ ಡಿಕೆಶಿವಕುಮಾರ್

ಲೋಕ ಗೆಲ್ಲಲು ಸಮರ ಸಾರಿದ ಡಿಕೆಶಿವಕುಮಾರ್
bangalore , ಶುಕ್ರವಾರ, 25 ಆಗಸ್ಟ್ 2023 (13:26 IST)
ಶಿವಮೊಗ್ಗ ಭಾಗದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಿರುವ ಡಿಕೆಶಿವಕುಮಾರ್ ವಿವಿಧ ಪಕ್ಷದ ನಾಯಕರನ್ನ ಕಾಂಗ್ರೆಸ್ ನತ್ತ ಸೆಳೆಯುತ್ತಿದ್ದಾರೆ.ಜಿಲ್ಲಾ ಮಟ್ಟದಲ್ಲಿ ಆಪರೇಷನ್ ಮಾಡಲು ಕರೆ ನೀಡಿದ್ದಾರೆ.ಬಿಜೆಪಿ ಪ್ರಾಭಲ್ಯ ಇರುವ ಭಾಗದಲ್ಲಿ ಬಿಜೆಪಿ ನಾಯಕರನ್ನೆ ಸೆಳೆಯುತ್ತಿದ್ದಾರೆ ಬಿಜೆಪಿ ಪ್ರಾಭಲ್ಯ ಇರುವ ಕಡೆ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಿರುವ ಡಿಕೆಶಿವಕುಮಾರ್ ವಿವಿಧ ಪಕ್ಷಗಳಿಂದ ಹಲವು ಮುಖಂಡರನ್ನು ಪಕ್ಷಕ್ಕೆ ಕರೆತರಲು ಮುಂದಾಗಿದ್ದಾರೆ.ಇಂದು ಮಾಜಿ ಸಂಸದ ಆಯನೂರ ಮಂಜುನಾಥ್,ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡ ಅವರನ್ನ ಕಾಂಗ್ರೆಸ್ ಗೆ ಪಕ್ಷದ ಭಾವುಟ ನೀಡಿ ಬರಮಾಡಿಕೊಂಡಿಕೊಂಡ್ರು.

ಲೋಕಸಭಾ ಚುನಾವಣೆ ಹಾಗೂ ಪದವೀಧರರ ಶಿಕ್ಷಕ ಕ್ಷೇತ್ರದ ಚುನಾವಣೆ ದೃಷ್ಟಿಯಿಂದ ಆಯನೂರ ಮಂಜುನಾಥ್ ಅವರನ್ನ ಕಾಂಗ್ರೆಸ್ ಗೆ ಕರೆತರುವಲ್ಲು ಡಿಕೆಶಿ ಯಶಸ್ವಿ ಆಗಿದ್ದಾರೆ.ಅಲ್ಲದೆ ಸ್ಥಳಿಯ ಮಟ್ಟದ ಚುನಾವಣೆ,ಹಾಗೂ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಈ ಭಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಿದ್ದ ನಾಗರಾಜ್ ಗೌಡ ನನ್ನು ಮರಳಿ ಕಾಂಗ್ರೆಸ್ ತರುವಲ್ಲಿಯು ಯಶಸ್ವಿ ಆಗಿದ್ದಾರೆ.ಈ ವಿಧಾನಸಭೆ ಚುನಾವಣೆಯಲ್ಲಿ ಕೇವಲ 9 ಸಾವಿರ ಮತಗಳ ಅಂತರದಿಂದ ಬಿ ಎಸ್ ವೈ ಪುತ್ರ ವಿಜಯೇಂದ್ರ ವಿರುದ್ಧ ಸೋತಿದ್ದಾರೆ‌.ಈ ಹಿನ್ನಲೆ ಇವರನ್ನ ಮತ್ತೆ ಪಕ್ಷಕ್ಕೆ ಸೇಳುವುದು ಕೊಳ್ಳುವ ಮೂಲಕ ವಿಜೇಂದ್ರಗೆ ಡಿಕೆಶಿ ಶಾಕ್ ನೀಡಿದ್ದಾರೆ.

ಇಬ್ಬರು ನಾಯಕರನ್ನ ಸ್ವಾಗತಮಾಡಿಕೊಂಡು ಮಾತನಾಡಿದ ಡಿಕೆಶಿವಕುಮಾರ್ ಹಿಂದೆಯೇ ಆಯನೂರು ಮಂಜುನಾಥ್ ಪಕ್ಷಕ್ಕೆ ಬರ್ತೀವಿ ಅಂತ ಹೇಳಿದ್ರು.ಆದರೆ ಕಾರಣಾಂತರಗಳಿಂದ ಸೇರಿಸಿಕೊಳ್ಳಲಾಗಿರಲಿಲ್ಲ.ಕಾಂಗ್ರೆಸ್ ಪಾರ್ಟಿ ಬಸ್ಸು ಸೀಟು ತರ ಆಗಬಾರದು.ಹತ್ತೋದು ಇಳಿಯೋದು ಆಗಬಾರದು.ಕಾಂಗ್ರೆಸ್ ಸೇರಿಕೊಂಡು ಪಕ್ಷದಲ್ಲೇ ಇರೋದೆ ಒಂದು ಸುದೈವ.ಕಾಂಗ್ರೆಸ್‌ಗೆ ಆದ ಇಂದು ಇತಿಹಾಸ ಇದೆ.ಪಕ್ಷಕ್ಕೆ ಜಿಲ್ಲಾ ಮಟ್ಟದಲ್ಲಿ ಬೇರೆ ಪಕ್ಷದ ಮುಖಂಡರು ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಬರುವುದಾರೆ ಅವರನ್ನ ಬರಮಾಡಿಕೊಳ್ಳಿ ಈ ಮೂಲಕ ಮತಗಳ ಸಂಖ್ಯೆ ಹೆಚ್ಚಿಗೆ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ರು.
 ದಳ ಬಿಟ್ಟು ಕೈ ಹಿಡಿದ ಆಯನೂರು ಮಂಜುನಾಥ್ ಮಾತನಾಡಿ ನಾನು ನನ್ನ ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದೇವೆ.ಯಾವುದೇ ಕಂಡಿಷನ್ ಇಲ್ಲದೆ ಅನ್ ಕಂಡಿಷನ್ ಆಗಿ ಡಿಕೆಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದೇವೆ.ಬರುವ ದಿನಗಳಲ್ಲಿ ಜಿಲ್ಲಾ ಜಿಲ್ಲಾ ತಾಲ್ಲೂಕು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ನಮ್ಮ‌ ಶಕ್ತಿ ವಿನಿಯೋಗ ಮಾಡಿ ತೊಡಗಿಸಿಕೊಳ್ತಿವಿ ಎಂದರು.ಇನ್ನೂ ನಾಗರಾಜ್ ಗೌಡ ಮಾತನಾಡಿ ಇವತ್ತು ಮತ್ತೆ ಕಾಂಗ್ರೆಸ್ ಸೇರೋದಕ್ಕೆ ಡಿಸಿಎಂ ಅವಕಾಶ ಕೊಟ್ಟಿದ್ದಾರೆ. ಶಿಕಾರಿಪುರದಲ್ಲಿ ಭ್ರಷ್ಟಾಚಾರದ ಹಣ ಹಂಚಿ ೧೦೦ ರಿಂ ೧೫೦ ಕೋಟಿ ಹಂಚಿ ಚುನಾವಣೆ ಮಾಡಿದ್ದಾರೆ. ಶಿಕಾರಿಪುರದ ಜನ ಹಣಕ್ಕೆ ಯಾರು ಖರೀದಿಯಾಗಿಲ್ಲಾ. ಇಗ ಶಾಸಕರು ಆಯ್ಕೆ ಯಾಗಿದ್ದಾರಲ್ಲಾ ಅವರ ವಿರುದ್ದ ೭೦ ಸಾವಿರ ಮತ ಹಾಕಿ ಅವರು ವಿರುದ್ದ ನನಗೆ ಮತ ಹಾಕಿ ಸರಿಯಾದ ಉತ್ತರ ಕೊಟ್ರು. ಯಾವುದೇ ಚುನಾವಣೆ ಬಂದರು ಪಕ್ಷ ಹೇಳಿದಂತೆ ಕೇಳ್ತಿನಿ ಎಂದು ಹೇಳಿದ್ರು.ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಡಿಕೆಶಿವಕುಮಾರ್ ಈದೇ ರೀತಿಯಲ್ಲಿ ಹಲವು ನಾಯಕರನ್ನ ಬೇರೆ ಬೇರೆ ಪಕ್ಷದವರನ್ನ ಪಕ್ಷದತ್ತ ಸೆಳೆದುಕೊಂಡು ಚುನಾವಣೆಯಲ್ಲಿ ಯಶಸ್ವಿ ಆಗಿದ್ದಾರೆ.ಅದೇ ರೀತಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಕೆ ಡಿಕೆಶಿವಕುಮಾರ್ ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಮಶೇಖರ್ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಕಾಂಗ್ರೆಸ್ ನವರು ಇನ್ನಾದರೂ ಬುದ್ಧಿ ಕಲಿಯಲಿ-ಆರ್ ಅಶೋಕ್