Publish Date: Fri, 10 Jan 2020 (18:55 IST)
Updated Date: Fri, 10 Jan 2020 (18:57 IST)
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇನ್ನೂ ಬದುಕಿದೆಯಾ? ಹೀಗಂತ ರಾಜ್ಯದ ಸಚಿವರೊಬ್ಬರು ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ ಬದುಕಿದೆ ಅಲ್ಲದೇ ರಾಜಕೀಯದಲ್ಲಿ ಇದೆ ಅಂತ ತೋರಿಸಿಕೊಳ್ಳೋದಕ್ಕಾಗಿಯೇ ಹೆಚ್.ಡಿ.ಕುಮಾರಸ್ವಾಮಿಯವರು ವಿಡಿಯೋ ಸಿ.ಡಿ.ಬಿಡುಗಡೆಗೊಳಿಸಿದ್ದಾರೆ.
ಹೀಗಂತ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದು, ಕುಮಾರಸ್ವಾಮಿ ಎಷ್ಟೇ ಸಿಡಿಗಳನ್ನು ಬಿಡುಗಡೆ ಮಾಡಿದ್ರೂ ಇನ್ನೂ ಹತ್ತು ಜನ್ಮ ಪಡೆದುಕೊಂಡು ಬಂದರೂ ಮತ್ತೆ ಸಿಎಂ ಆಗೋದಿಲ್ಲ ಅಂತ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಯಾವುದೇ ಕಾರಣವಿಲ್ಲದೇ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ ಅಂತ ಈಶ್ವರಪ್ಪ ಹರಿಹಾಯ್ದಿದ್ದಾರೆ.