Publish Date: Fri, 10 Jan 2020 (15:38 IST)
Updated Date: Fri, 10 Jan 2020 (15:40 IST)
ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕೆ ಮಾಡೋದ್ರಲ್ಲೇ ಕಾಲ ಕಳೆಯುತ್ತಿದ್ದಾರೆ. ಮೋದಿ ಒಬ್ಬ ಸನ್ಯಾಸಿಯಂತಿದ್ದಾರೆ.
ಹೀಗಂತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮೋದಿಗೆ ವಿರುದ್ಧವಾದ ಮತ್ತೊಬ್ಬ ನಾಯಕರು ಕಾಂಗ್ರೆಸ್ ನಲ್ಲಿ ಇಲ್ಲ. ಆದರೂ ಮೋದಿಯನ್ನು ಅಧಿಕಾರದಿಂದ ದೂರ ಇಡ್ತೇವೆ ಅಂತಾನೆ ಹೇಳ್ತಿದ್ದಾರೆ.
ವಿಶೇಷ ಸ್ಥಾನಮಾನವನ್ನ ಕಾಶ್ಮೀರದಲ್ಲಿ ರದ್ದು ಮಾಡಿದೆ. ಕೇಂದ್ರ ಜಾರಿಮಾಡುವ ಎಲ್ಲ ಕೆಲಸಗಳ ಬಗ್ಗೆಯೂ ಕಾಂಗ್ರೆಸ್ ಖ್ಯಾತೆ ತೆಗೆಯುತ್ತಿದೆ ಅಂತ ಕಿಡಿಕಾರಿದ್ದಾರೆ.