Select Your Language

Notifications

webdunia
webdunia
webdunia
webdunia

ಪ್ರಧಾನಿ ವಿರುದ್ಧ ಬೀದಿಗಿಳಿದು ಕಿಡಿಕಾರಿದ ಕಾರ್ಮಿಕರು

ಪ್ರಧಾನಿ ವಿರುದ್ಧ ಬೀದಿಗಿಳಿದು ಕಿಡಿಕಾರಿದ ಕಾರ್ಮಿಕರು
ಚಿಕ್ಕೋಡಿ , ಬುಧವಾರ, 8 ಜನವರಿ 2020 (18:00 IST)
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾರ್ಮಿಕರು ಕಿಡಿಕಾರಿದ್ದಾರೆ.

ಕಾರ್ಮಿಕ ವಿರೋಧಿ ನೀತಿ ಜಾರಿಗೆ ತರುತ್ತಿರೋ ಕೇಂದ್ರದ ಕ್ರಮ ಖಂಡಿಸಿ ಪ್ರತಿಭಟನೆ ಜೋರಾಗಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ, ರಾಯಭಾಗ, ಚಿಕ್ಕೋಡಿ ಪಟ್ಟಣಗಳಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.  

ಸಿ ಐ ಟಿ ಯು, ಕೆ ಎಸ್ ಆರ್ ಟಿ ಸಿ, ಗುತ್ತಿಗೆ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಅಂಚೆ ಮತ್ತು ಎಲ್ ಐಸಿ ನೌಕರರ ಸಂಘಗಳು ಪಾಲ್ಗೊಂಡಿದ್ದವು.

ಪ್ರತಿಭಟನೆಗೆ ರಾಜ್ಯ ರೈತ ಸಂಘ, ಹಸಿರು ಸೇನೆ, ಜಯ ಕರ್ನಾಟಕ, ಕರ್ನಾಟಕ ವಿಜಯಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಪ್ರಕಾಶ್ ಅಂಬೇಡ್ಕರ್ ಯುವ ಬ್ರಿಗೇಡ್, ಮಾನವಹಕ್ಕು ಸಂಘಟನೆ ಸೇರಿದಂತೆ ಹಲವು ಸಂಘಟನೆಗಳಿಂದ ವ್ಯಾಪಕ ಬೆಂಬಲ ದೊರೆಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಿಗ್ಗೆಯಿಂದಲೇ ಭಾರತ ಬಂದ್ ಭಾರೀ ಎಫೆಕ್ಟ್