Webdunia - Bharat's app for daily news and videos

Install App

ಕಾಂಗ್ರೆಸ್ ಸರ್ಕಾರ ಬದುಕಿದೆಯೋ, ಸತ್ತಿದೆಯೋ: ಸಿಎಂಗೆ ಆರ್‌ ಅಶೋಕ್ ಪ್ರಶ್ನೆ

Sampriya
ಶನಿವಾರ, 5 ಏಪ್ರಿಲ್ 2025 (16:14 IST)
ಬೆಂಗಳೂರು:  2024-25 ರ ಆರ್ಥಿಕ ವರ್ಷ ಮುಗಿದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪಯೋಜನೆಯ ₹9,219.36 ಕೋಟಿ ರೂಪಾಯಿ ವಿವಿಧ ಇಲಾಖೆಗಳಲ್ಲಿ ಇನ್ನೂ ಬಳಕೆಯಾಗದೆ ಉಳಿದಿದೆಯಲ್ಲ, ನಿಮ್ಮ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ವಯಂ ಘೋಷಿತ 'ದಲಿತರ ಚಾಂಪಿಯನ್' ಸಿಎಂ ಸಿದ್ದರಾಮಯ್ಯನವರೇ,

ಅಹಿಂದ ಮತಗಳ ಮೇಲೆ ಸವಾರಿ ಮಾಡಿ ಅಧಿಕಾರ ಅನುಭವಿಸುತ್ತಿರುವ ತಾವು ಪರಿಶಿಷ್ಟ ಸಮುದಾಯಗಳಿಗೆ ಈ ಪರಿ ದ್ರೋಹ ಮಾಡುತ್ತಿದ್ದೀರಲ್ಲ, ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದೆಯೇ?

2024-25 ರ ಆರ್ಥಿಕ ವರ್ಷ ಮುಗಿದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪಯೋಜನೆಯ ₹9,219.36 ಕೋಟಿ ರೂಪಾಯಿ ವಿವಿಧ ಇಲಾಖೆಗಳಲ್ಲಿ ಇನ್ನೂ ಬಳಕೆಯಾಗದೆ ಉಳಿದಿದೆಯಲ್ಲ, ನಿಮ್ಮ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ?

ರಾಜಕೀಯ ವೇದಿಕೆಗಳಲ್ಲಿ, ಸದನದಲ್ಲಿ,  ಭಾಷಣಗಳಲ್ಲಿ, ದಲಿತರು, ಹಿಂದುಳಿದವರ ಉದ್ಧಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿದರೆ ತಳಸಮುದಾಯಗಳ ಕಲ್ಯಾಣ ಆಗುವುದಿಲ್ಲ ಸಿದ್ದರಾಮಯ್ಯನವರೇ. ಅಧಿಕಾರ ಇದ್ದಾಗ ಪ್ರಾಮಾಣಿಕತೆಯಿಂದ ಪರಿಶಿಷ್ಟ ಸಮುದಾಯಗಳ ಏಳ್ಗೆ ಬಗ್ಗೆ ಬದ್ಧ ತೋರದೆ, ಮೊಸಳೆ ಕಣ್ಣೀರು ಸುರಿಸುವ ನಿಮ್ಮ ಬೂಟಾಟಿಕೆ ಈಗ ಬಯಲಾಗಿದೆ. ಕರ್ನಾಟಕ ಪಕ್ಷ ದಲಿತ ವಿರೋಧಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್, ಇರಾನ್ ಯುದ್ಧ ಆದ್ರೆ ಟೆನ್ಷನ್ ಪಾಕಿಸ್ತಾನಕ್ಕೆ: ಯಾಕೆ ಗೊತ್ತಾ

ಅಹಮದಾಬಾದ್ ವಿಮಾನ ಪತನ: ಸಾವಿನ ಸಂಖ್ಯೆ 274 ಕ್ಕೆ ಏರಿಕೆ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

Karnataka Weather: ಜೂನ್ 16 ರವರೆಗೂ ಈ ಜಿಲ್ಲೆಗಳ ಹವಾಮಾನ ತಪ್ಪದೇ ಗಮನಿಸಿ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಮುಂದಿನ ಸುದ್ದಿ
Show comments