Publish Date: Tue, 19 Apr 2022 (21:09 IST)
Updated Date: Tue, 19 Apr 2022 (21:11 IST)
ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ 15 ಜನರನ್ನು ಬಂಧಿಸಲಾಗಿದ್ದು, ಒಟ್ಟು 12 FIRಗಳನ್ನು ದಾಖಲಾಗಿದೆ. ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 104 ಜನರನ್ನು ಬಂಧಿಸಲಾಗಿದೆ. ದೇವಸ್ಥಾನ, ಮನೆ ಹಾಗೂ ಪೋಸ್ಟ್ ಆಫೀಸ್ ಮೇಲೆ ಕಲ್ಲು ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಮುಂದುವರೆಸಿದ್ದು, ಬೇರೆ ಕಡೆ ಎಲ್ಲೂ ಗಲಾಟೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ವಾಹನದ ಮೇಲೆ ಮೌಲ್ವಿ ಸೇರಿದಂತೆ ಹಲವರು ಹತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಆರಂಭಿಸಲಾಗಿದೆ