Select Your Language

Notifications

webdunia
webdunia
webdunia
webdunia

‘ನಿರಾಣಿ ಪರ ಲಾಬಿಗೆ ಪಂಚಮಸಾಲಿ 3ನೇ ಪೀಠ’

Panchamsali 3rd seat for a nihilistic lobby
bangalore , ಮಂಗಳವಾರ, 19 ಏಪ್ರಿಲ್ 2022 (21:06 IST)
ಯಾವ ಕಾರಣಕ್ಕೆ ಪಂಚಮಸಾಲಿ 3ನೇ ಪೀಠ ಮಾಡಿದ್ದಾರೆ? ಸಮುದಾಯದ ಉದ್ದಾರಕ್ಕೆ ಪಂಚಮಸಾಲಿ 3ನೇ ಪೀಠ ಮಾಡಿದ್ದಾರಾ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೆ ಪಂಚಮಸಾಲಿ 3ನೇ ಪೀಠ ಮಾಡಿದ್ದಾರೆ? ಮುರುಗೇಶ್ ನಿರಾಣಿ ಪರ ಲಾಬಿ ಮಾಡುವುದಕ್ಕೆ ಪಂಚಮಸಾಲಿ 3ನೇ ಪೀಠ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹಾನಗಲ್ ಉಪಚುನಾವಣೆ ವೇಳೆ ಸಿಎಂಗೆ ಬ್ಲ್ಯಾಕ್ ಮೇಲ್​​​ ಮಾಡಿ ಹಣ ವಸೂಲಿ ಮಾಡಿದ್ದಾರೆ. ತುಂಗಾ ಆರತಿ ನೆಪದಲ್ಲಿ 35 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವಚನಾನಂದ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾವಣಗೆರೆಯಲ್ಲಿ 'ಖಾರ'ಜೋಳ