Select Your Language

Notifications

webdunia
webdunia
webdunia
webdunia

ರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ಪರೋಕ್ಷ ವಾಗ್ದಾಳಿ

Iqbal Ansari indirect attack against Reddy
ಕೊಪ್ಪಳ , ಗುರುವಾರ, 9 ಫೆಬ್ರವರಿ 2023 (20:29 IST)
ಅಭಿವೃದ್ಧಿ ಕಡೆಗೆ ಅನ್ಸಾರಿ ಆಗಮನ ಕಾರ್ಯಕ್ರಮದಲ್ಲಿ ಜನಾರ್ಧನ ರೆಡ್ಡಿ ವಿರುದ್ಧ ಸಚಿವ ಇಕ್ಬಾಲ್ ಅನ್ಸಾರಿ ವಾಗ್ದಾಳಿಯನ್ನ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಚಿಲಕಮುಕಿ ಗ್ರಾಮದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗಣಿಧಣಿ ಜನಾರ್ಧನ ರೆಡ್ಡಿಯವರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯ ರಸ್ತೆಗಳಿಗೆ ಅವರಿಂದ ಒಂದು ಬುಟ್ಟಿ ಮಣ್ಣು ಹಾಕೋಕೆ ಆಗಿಲ್ಲ, ಇಲ್ಲೇನು ಅಭಿವೃದ್ಧಿ ಮಾಡ್ತಾರೆ. ಬಿಜೆಪಿಯವರು ಮನೆ ಕೊಡ್ತೀನಿ ಎಂದು ಸುಳ್ಳು ಹೇಳಿದ್ದಾರೆ. 2 ತಿಂಗಳಲ್ಲಿ ಅದೇಗೆ ಜಿಪಿಎಸ್ ಮಾಡುತ್ತಾರೆ, ಹೇಗೆ ಕಾಮಗಾರಿ ಫಲಾನುಭವಿಗಳಿಗೆ ಒದಗಿಸುತ್ತಾರೆ. ಇವರೆಲ್ಲ್ಲ ಶುದ್ಧ ಸುಳ್ಳುಗಳನ್ನ ಹೇಳುವ ಜನ ಇವರನ್ನ ಯಾರೂ ನಂಬಬೇಡಿ. ಇನ್ನೊಂದು ತಿಂಗಳಲ್ಲಿ ಎಲೆಕ್ಷನ್ ಅನೌನ್ಸ್ ಆಗುತ್ತೆ. ಅವರಿಗೆ ಏನು ಮಾಡೋಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖಡಕ್ ಎಚ್ಚರಿಕೆ