Select Your Language

Notifications

webdunia
webdunia
webdunia
webdunia

ಫೆಬ್ರವರಿಯಲ್ಲಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ: ರಾಜ್ಯ ಸಚಿವ ಸಂಪುಟ ತೀರ್ಮಾನ

ಫೆಬ್ರವರಿಯಲ್ಲಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ: ರಾಜ್ಯ ಸಚಿವ ಸಂಪುಟ ತೀರ್ಮಾನ
bengaluru , ಗುರುವಾರ, 15 ಜುಲೈ 2021 (14:24 IST)
ಕೊರೊನಾ ವೈರಸ್ ಹಾವಳಿಯಿಂದ ಮುಂದೂಡಲ್ಪಟ್ಟಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2022 ರ ಫೆಬ್ರವರಿಯಲ್ಲಿ ಆಯೋಜಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಫೆಬ್ರವರಿ 9, 10 ಮತ್ತು 11ಕ್ಕೆ ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಲು ನಿರ್ಧಾರಿಸಲಾಗಿದೆ.
 
ವಿಧಾನಸೌಧದ ಆವರಣದಲ್ಲಿ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸುವ ಕುರಿತಂತೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
 
ರಾಜ್ಯದಲ್ಲಿ ಆಕ್ಸಿಜನ್ ಘಟಕ ಆರಂಭಿಸಲು ವಿಶೇಷ ಪ್ರೋತ್ಸಾಹ ನೀಡಲು ಒಪ್ಪಿಗೆ. 6 ಆಕ್ಸಿಜನ್ ಘಟಕ ಇದ್ದು, ಇದನ್ನು ಇನ್ನೂ ಹೆಚ್ಚಿಸಲು ತೀರ್ಮಾನ. ಘಡಕ ಸ್ಥಾಪಿಸುವವರಿಗೆ 25% ಕ್ಯಾಪಿಟಲ್ ಸಬ್ಸಿಡಿ ನೀಡಲು ನಿರ್ಧಾರ, ವಿದ್ಯುತ್ ಸುಂಕದಿಂದ ಮೂರು ವರ್ಷಗಳಿಗೆ ಪೂರ್ಣ ವಿನಾಯಿತಿ ನೀಡಲು ತೀರ್ಮಾನ. ಸ್ಟಾಂಪ್ ಡ್ಯೂಟಿಯಿಂದ ಸಂಪೂರ್ಣ ವಿನಾಯಿತಿ ನೀಡಲು ತೀರ್ಮಾನ
 
ಕೃಷಿ ಇಲಾಖೆಯಿಂದ ರಾಜ್ಯದಲ್ಲಿ 2021-22 ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆ ಜಾರಿಗೆ ಅನುಮೋದನೆ. ಆಪ್‌ ಮೂಲಕ ರೈತರೇ ಬೆಳೆ ಸಮೀಕ್ಷೆ ಮಾಡಲಿದ್ದಾರೆ. ಈ ಸಂಬಂಧ 48 ಕೋಟಿ ರೂ.ಗೆ ಅನುಮೋದನೆ
 
ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಮೊದಲ‌ ಹಂತದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಗೋ ಶಾಲೆ ತೆರೆಯಲು 15 ಕೋಟಿ ರೂ. ಮೊತ್ತಕ್ಕೆ ಸಂಪುಟ ಅನುಮತಿ. ಬಳಿಕ ಹರಚ್ಚು ಹಣ ಬಿಡುಗಡೆ ಮಾಡಲು ತೀರ್ಮಾನ

Share this Story:

Follow Webdunia kannada

ಮುಂದಿನ ಸುದ್ದಿ

ನೂತನ ಸಚಿವರಿಗೆ ಮೋದಿ ‘ಸಂಸತ್ ಪಾಠ’: ಪ್ರತಿಪಕ್ಷಗಳಿಗೆ ತಕ್ಕ ಉತ್ತರ ನೀಡಿ!