Select Your Language

Notifications

webdunia
webdunia
webdunia
webdunia

‘ಜನಸಂಖ್ಯಾ ನೀತಿ’ ಸರ್ಕಾರದ ನಿಲುವೇನು?

‘ಜನಸಂಖ್ಯಾ ನೀತಿ’ ಸರ್ಕಾರದ ನಿಲುವೇನು?
Bangalore , ಬುಧವಾರ, 14 ಜುಲೈ 2021 (11:01 IST)
Bangalore: ಜನಸಂಖ್ಯಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಹಾಗೂ ಅಸ್ಸಾಂ ಮಾದರಿಯ ಜನಸಂಖ್ಯಾ ನೀತಿ ಕರ್ನಾಟಕದಲ್ಲೂ ಜಾರಿಗೊಳ್ಳುತ್ತಾ ಎಂಬ ಚರ್ಚೆಗಳು ಆರಂಭಗೊಂಡಿವೆ. ರಾಜ್ಯದಲ್ಲಿ ಈ ಕುರಿತಾಗಿ ಸರ್ಕಾರ ಯಾವುದೇ ಹೇಳಿಕೆ ನೀಡದಿದ್ದರೂ ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಕ್ತಪಡಿಸಿದ ಅಭಿಪ್ರಾಯ ಅನುಮಾನಗಳಿಗೆ ಕಾರಣವಾಗಿದೆ.




ಹೈಲೈಟ್ಸ್:
•             ಯು.ಪಿ, ಅಸ್ಸಾಂ ಮಾದರಿಯ ‘ಜನಸಂಖ್ಯಾ ನೀತಿ’ ಕರ್ನಾಟಕದಲ್ಲೂ ಜಾರಿಯಾಗುತ್ತಾ?
•             ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ಉದ್ದೇಶವೇನು?
•             ನೂತನ ಜನಸಂಖ್ಯಾ ನೀತಿ ಜಾರಿ ಬಗ್ಗೆ ರಾಜ್ಯ ಸರ್ಕಾರದ ನಿಲುವೇನು?

“ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕರ್ನಾಟಕವು ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿಯನ್ನು ತರಲು ಇದು ಸಕಾಲ.ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿರುವುದರಿಂದ, ಜನಸಂಖ್ಯೆಯ ಸ್ಫೋಟ ಸಂಭವಿಸಿದಲ್ಲಿ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗುತ್ತದೆ” ಎಂದು ಸಿ.ಟಿ ರವಿ ಟ್ವೀಟ್ ಮೂಲಕ ಇಂತಹದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ನೂತನ ಜನಸಂಖ್ಯಾ ನೀತಿ ಕರಡನ್ನು ಸಿದ್ಧಪಡಿಸಿದೆ. ವಿಶ್ವ ಜನಸಂಖ್ಯಾ ದಿನದಂದು ಇದನ್ನು ಬಿಡುಗಡೆ ಮಾಡಲಿದೆ. ಉತ್ತರ ಪ್ರದೇಶದಲ್ಲಿ ಸದ್ಯ ಜನನ ಪ್ರಮಾಣ ಪ್ರತಿ ಸಾವಿರಕ್ಕೆ ಶೇ 2.7ರಷ್ಟಿದೆ. 2026ರ ವೇಳೆಗೆ ಪ್ರತಿ ಸಾವಿರ ಜನಸಂಖ್ಯೆಗೆ ಜನನ ಪ್ರಮಾಣವನ್ನು ಶೇ 2.1ಕ್ಕೆ ಹಾಗೂ 2030ರ ವೇಳೆಗೆ ಶೇ 1.9ಕ್ಕೆ ಇಳಿಸುವ ಗುರಿ ಇದರ ಹಿಂದಿದೆ.

ನೂತನ ಜನಸಂಖ್ಯಾ ಕರಡಿನಲ್ಲಿ ಇರುವ ಅಂಶಗಳೇನು?
ಉತ್ತರ ಪ್ರದೇಶದಲ್ಲಿ ಜಾರಿಗೆ ತರಲು ಮುಂದಾಗಿರುವ ನೂತನ ಜನಸಂಖ್ಯಾ ನೀತಿ ಕರಡಿನಲ್ಲಿ ಕೆಲವೊಂದು ಪ್ರಮುಖವಾದ ಅಂಶಗಳು ಇವೆ.
*ಕುಟುಂಬ ಯೋಜನೆ ಕಾರ್ಯಕ್ರಮಗಳ ಅಡಿ ಜಾರಿಗೊಳಿಸಲಾದ ಗರ್ಭನಿರೋಧಕ ಹಾಗೂ ಗರ್ಭಪಾತದ ಕ್ರಮಗಳ ಅವಕಾಶ ಹೆಚ್ಚಳಕ್ಕೆ ಕ್ರಮ
* ನೂತನ ಜನಸಂಖ್ಯಾ ನೀತಿಯಲ್ಲಿ ಇಬ್ಬರು ಮಕ್ಕಳ ನೀತಿಗೆ ಆದ್ಯತೆ ನೀಡಲಾಗಿದೆ
* ಎರಡಕ್ಕಿಂತ ಹೆಚ್ಚು ಮಕ್ಕಳು ಇರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ
*ಸರಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ ಹಾಗೂ ಸರಕಾರಿ ಸಬ್ಸಿಡಿಗಳನ್ನು ಪಡೆಯುವಂತಿಲ್ಲ
*ಸರಕಾರಿ ಉದ್ಯೋಗಿಗಳು ಬಡ್ತಿ ಪಡೆಯಲೂ ಇದರಿಂದ ಸಾಧ್ಯವಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ಮತ್ತೆ ಲಾಕ್ ಡೌನ್