ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣ ಸಂಬಂಧ ತನಿಖೆ ನಿರ್ಣಾಯಕ ಘಟ್ಟದಲ್ಲಿ ಒಬ್ಬೊಬ್ಬರ ಅಸಲಿ ಮುಖ ಬಹಿರಂಗವಾಗುತ್ತಿದ್ದ ಹಾಗೇ ಧರ್ಮಸ್ಥಳದ ಅಧಿಕೃತ ಖಾತೆಯಿಂದ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ.
ಎಸ್ಐಟಿ ಅಧಿಕಾರಿಗಳು ಮಾಸ್ಕ್‌ಮ್ಯಾನ್ ಅನ್ನು ಬಂಧಿಸಿದ್ದು ಆತನ ಅಸಲಿ ಮುಖ ಬಹಿರಂಗಗೊಂಡಿದೆ. ಅದಲ್ಲದೆ ಧರ್ಮಸ್ಥಳದಲ್ಲಿ ನನ್ನ ಮಗಳು ಅನನ್ಯಾ ನಾಪತ್ತೆಯಾಗಿರುವುದು ಸುಳ್ಳು ಎಂದು ಸುಜಾತಾ ತಪ್ಪೊಪ್ಪೊಕೊಂಡ ಬೆನ್ನಲ್ಲೇ ತನಿಖೆ ಬೇರೆ ದಿಕ್ಕನ್ನೇ ಪಡೆಯಿತು.
ಅದರ ಬೆನ್ನಲ್ಲೇ ಧರ್ಮಸ್ಥಳದ ಅಧಿಕೃತ ಫೇಸ್ ಬುಕ್ ಖಾತೆಯಿಂದ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಶಿವತಾಂಡವದ ಫೋಟೋ ಪೋಸ್ಟ್ ಮಾಡಿದೆ. ನಮೋ ಮಂಜುನಾಥ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.