Select Your Language

Notifications

webdunia
webdunia
webdunia
webdunia

ಬನ್ನೇರುಘಟ್ಟ ಮನೆಗೆ ಬಂತು ಆ ಒಂದು ಪತ್ರ, ಯೂಟ್ಯೂಬರ್‌ ಎಂಡಿ ಸಮೀರ್‌ಗೆ ಶುರುವಾಯಿತು ನಡುಕ

ಧರ್ಮಸ್ಥಳ ಮಾಸ್ ಬುರಿಯಾಸ್ಲ್ ಕೇಸ್

Sampriya

ಮಂಗಳೂರು , ಶನಿವಾರ, 23 ಆಗಸ್ಟ್ 2025 (16:57 IST)
ಮಂಗಳೂರು: ಧರ್ಮಸ್ಥಳದ ವಿರುದ್ಧ ವಿಡಿಯೋ ಮೂಲಕ ಅಪಪ್ರಚಾರ ಸಂಬಂಧಿಸಿದಂತೆ ಕ್ರಿಮಿನಲ್ ಆರೋಪ ಎದುರಿಸುತ್ತಿ  ಯೂಟ್ಯೂಬರ್‌ ಎಂಡಿ ಸಮೀರ್‌ಗೆ  ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಸಮೀರ್‌ ಬನ್ನೇರುಘಟ್ಟದ್ದಲ್ಲಿದ್ದ ಬಾಡಿಗೆ ಮನೆಗೆ ನೋಟಿಸ್‌ ಅನ್ನು ಪೊಲೀಸರು ಕಳುಹಿಸಿದ್ದಾರೆ. 

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ವಿಷಯದ ಕುರಿತು ಸಮೀರ್ ಕ್ರಿಮಿನಲ್ ಆರೋಪದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಸಮೀರ್ ಇದೀಗ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪರಿಶೀಲನೆಯಲ್ಲಿದ್ದು ವಿಚಾರಣೆ ಭೀತಿ ಎದುರಿಸುತ್ತಿದ್ದಾರೆ.

ನೋಟಿಸ್‌ನಲ್ಲಿ ಆಗಸ್ಟ್‌ 24ರ ಒಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

ಆಗಸ್ಟ್ 21 ರಂದು ಮಂಗಳೂರು ನ್ಯಾಯಾಲಯವು ಸಮೀರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ ನಂತರ ಬಳ್ಳಾರಿಯಲ್ಲಿರುವ ಅವರ ನಿವಾಸದಲ್ಲಿ ಅಂಟಿಸಲಾದ ನೋಟಿಸ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ವಿಷಯದ ಕುರಿತು ಸಮೀರ್ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ.

ಸಮೀರ್ ವಿರುದ್ಧ ದಾಖಲಾದ ಪ್ರಕರಣಗಳು ಹೀಗಿದೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 192 (ಗಲಭೆಯನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುವುದು), 240 (ಸುಳ್ಳು ಮಾಹಿತಿ ನೀಡುವುದು) ಮತ್ತು 353(1)(ಬಿ) (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಬುರುಡೆ ರಹಸ್ಯ: ಮಾಸ್ಕ್‌ಮ್ಯಾನ್‌ ಕೊಟ್ಟ ಆ ಒಂದು ಹೇಳಿಕೆಯಿಂದ ಅಣ್ಣನೂ ಲಾಕ್‌