ಬ್ರಹ್ಮಾವರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಡಿಯಲ್ಲಿ ಜೈಲು ಸೇರಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ಜಾಮೀನು ಲಭಿಸಿದೆ.
ಉಡುಪಿ ಜಿಲ್ಲಾ ಕೋರ್ಟ್ ಮಹೇಶ್ ಶೆಟ್ಟಿಗೆ ಷರತ್ತು ಬದ್ಧ ಜಾಮೀನನ್ನು ನೀಡಿದೆ.
ರಾಷ್ಟ್ರೀಯ ಬಿಜೆಪಿ ಮುಖಂಡನ ವಿರುದ್ಧದ ಅವಹೇಳನಕಾರಿ ಹೇಳಿಕೆ ಸಂಬಂಧ ಮಹೇಶ್ ಶೆಟ್ಟಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಸಂಬಂಧ ವಿಚಾರಣೆಗೆ ಬಾರದ ಹಿನ್ನೆಲೆ ಮಹೇಶ್ ಶೆಟ್ಟಿ ಅವರನ್ನು ಗುರುವಾರ ವಶಕ್ಕೆ ಪಡೆಯಲಾಯಿತು. ಇನ್ನೂ ತಿಮರೋಡಿ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಿಸಿದ ಕೋರ್ಟ್ ಇದೀಗ ಷರತ್ತು ಬದ್ಧ ಜಾಮೀನನ್ನು ನೀಡಿದೆ.