Select Your Language

Notifications

webdunia
webdunia
webdunia
webdunia

ಕೆ ಎಂ ಎಫ್ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ..!

ಕೆ ಎಂ ಎಫ್ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ..!
bangalore , ಬುಧವಾರ, 14 ಸೆಪ್ಟಂಬರ್ 2022 (20:57 IST)
ಕ್ಷೀರ ಭಾಗ್ಯ ಯೋಜನೆ ಗೆ ಪ್ರಶಸ್ತಿ ಒಲಿದಿದೆ.ವಿಶ್ವ ಡೈರಿ ಶೃಂಗ ಸಭೆಯಲ್ಲಿ ಪ್ರಧಾನ ಅಂತಾರಾಷ್ಟ್ರೀಯ ಡೈರಿ ಸಂಸ್ಥೆಯಿಂದ ಪ್ರಶಸ್ತಿ ಪ್ರಧಾನವಾಗಲಿದೆ.
 
ಪ್ರಪಂಚದ 144 ಕಂಪನಿಗಳು  ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.ಇನ್ನೋವೇಶನ್ ಆಫ್ ಇನ್ ಸ್ಕೂಲ್ ಮಿಲ್ಕ್ ಪ್ರೋಗ್ರಾಂ ವತಿಯಿಂದ K M F  ವ್ಯವಸ್ಥಾಪಕ ನಿರ್ದೇಶಕ  ಸತೀಶ್ ಅವರು  ಪ್ರಶಸ್ತಿ ಸ್ವೀಕರಿಸಿದಾರೆ.ರಾಜ್ಯ ಸರ್ಕಾರ ಹಾಗೂ ಕೆ ಎಂ ಎಫ್ ಸಹಯೋಗದಲ್ಲಿ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಅಪೌಷ್ಠಿಕ ನಿವಾರಣೆಗಾಗಿ ಕ್ಷೀರ ಭಾಗ್ಯ ಯೋಜನೆ ಜಾರಿ ತರಲಾಗಿತ್ತು.9 ವರ್ಷ ಪೂರೈಸಿದ ಕ್ಷೀರ ಭಾಗ್ಯಕ್ಕೆ ಪ್ರಶಸ್ತಿ ಲಭಿಸಿದೆ.
 
ರಾಜ್ಯದ 55,683  ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತ 150 ml ಹಾಲು ವಿತರಣೆ ಮಾಡಲಾಗಿದೆ.
1 ರಿಂದ 10ನೇ ತರಗತಿಯ ಸುಮಾರು 64 ಲಕ್ಷ ಮಕ್ಕಳಿಗೆ  ಉಚಿತ ಹಾಲು ವಿತರಣೆ ಮಾಡುತ್ತಿದ್ದು,ರಾಜ್ಯದ 64 ಸಾವಿರ ಅಂಗನವಾಡಿಯಲ್ಲಿ 6 ತಿಂಗಳಿಂದ  6 ವರ್ಷದ  39.50 ಲಕ್ಷ ಮಕ್ಕಳಿಗೆ ವಾರದ 5 ದಿನಗಳ ಕಾಲ 150 ml ಉಚಿತ ಹಾಲು ವಿತರಣೆ ಮಾಡಲಾಗ್ತಿದೆ.ಸುಮಾರು ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಈ ಕ್ಷೀರ ಭಾಗ್ಯ ಯೋಜನೆ ಜಾರಿಯಾಗಲಿದೆ
 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ತಂಡದ ಬಗ್ಗೆ ಎಚ್ ಡಿಕೆಗೆ ಅಸಾಮಾಧಾನ