Select Your Language

Notifications

webdunia
webdunia
webdunia
webdunia

ಫ್ರೀಡಂ ಪಾರ್ಕ್ ನಲ್ಲಿ ಸಾರಿಗೆ ಸಚಿವರ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಧರಣಿ

webdunia
bangalore , ಬುಧವಾರ, 14 ಸೆಪ್ಟಂಬರ್ 2022 (20:30 IST)
ಫ್ರೀಡಂ ಪಾರ್ಕ್ ನಲ್ಲಿ ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.ಕಾರ್ಯಕರ್ತರು ಸರ್ಕಾರಕ್ಕೆ ಇನ್ನು ಎಷ್ಟು ಬಲಿ ಬೇಕು ಅಂತಿದ್ದಾರೆ.ಅಷ್ಟೇ ಅಲ್ಲದೇ ಸರ್ಕಾರವನ್ನ ಕಾರ್ಯಕರ್ತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
 
ಸಾರಿಗೆ ನೌಕರರ ಕಂಡರೆ ಏಕೆ ಇಷ್ಟೊಂದು ನಿರ್ಲಕ್ಷ್ಯ ಅಂತಾ ಪ್ರಶ್ನೆ ಮಾಡಿದ್ದಾರೆ.ಸಾರಿಗೆ ಸಚಿವರ ಬೇಜವಾಬ್ದಾರಿ ನಡೆ ಖಂಡಿಸಿ ಸಾರಿಗೆ ಸಚಿವ ಶ್ರೀರಾಮುಲು ವಿರುದ್ದ ಕಾರ್ಯಕರ್ತರು ಬಾರಿ ಹೋರಾಟ ನಡೆಸುತ್ತಿದ್ದಾರೆ.ಸಾರಿಗೆ ನೌಕರ ನಿರಂತರ ಆತ್ಮಹತ್ಯೆಗಳಿಗೆ ಸಾರಿಗೆ ಸಚಿವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸುತ್ತಿದ್ದಾರೆ.ಅಷ್ಟೇ ಅಲ್ಲದೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಮ್ ಆದ್ಮಿ ಸಿದ್ದತೆ ನಡೆಸಿದೆ.ಶ್ರೀರಾಮುಲುನ್ನ ಕೂಡಲೇ ಮಂತ್ರಿಮಂಡಲದಿಂದ ವಜಾಗೊಳಿಸ್ಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.
 
ಫ್ರೀಡಂ ಪಾರ್ಕ್ ನಲ್ಲಿ ಕಾರ್ಯಕರ್ತರು ಬಿಜಿಪಿ ಸರ್ಕಾರದ ವಿರುದ್ಧ ಧಿಕ್ಕಾರ  ಕೂಗಿ ಆಕ್ರೋಶ ಹೊರಹಾಕ್ತಿದ್ದಾರೆ.40% ಸರ್ಕಾರಕ್ಕೆ ಧಿಕ್ಕಾರ ಹಾಕುತ್ತಿರುವ ಮುಖಂಡರು.ಬಿಎಂಟಿಸಿ ಸಿಬ್ಬಂದಿಗಳ ಸಾವಿಗೆ ಬಿಜೆಪಿಯ ಮಂತ್ರಿಗಳು ಕಾರಣ ಎಂದು ಆರೋಪ ಮಾಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಷಡ್ಯಾಂತ್ರದ ಬಗ್ಗೆ ಮಾಜಿ ಸಿಎಂ ಬಿ ಎಸ್ ವೈ ಪ್ರಶ್ನೆ