Publish Date: Wed, 15 May 2019 (15:37 IST)
Updated Date: Wed, 15 May 2019 (15:39 IST)
ಬಡ್ಡಿ ವ್ಯವಹಾರಕ್ಕೆ ರೌಡಿಗಳಿಂದ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ನಡೆದಿದೆ.
ಭರತ್ 32 ಮೃತ ವ್ಯಕ್ತಿಯಾಗಿದ್ದಾನೆ. ಮಾರ್ಕೇಟ್ ವೇಲು@ ಮಾರ್ಕೆಟ್ ವೇಡಿ ಎಂಬಾತನ ಕಡೆಯವರು ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮೀಟರ್ ಬಡ್ಡಿ ದಂಧೆಕೋರರಿಂದ ಕೊಲೆ ನಡೆದಿರುವ ಶಂಕೆಯಿದೆ. ಬೆಳಗಿನ ಜಾವ ಬೆಂಗಳೂರಿನ ಕೆ ಆರ್ ಮಾರ್ಕೆಟ್ ನಲ್ಲಿ ನಡೆದ ಘಟನೆ ಇದಾಗಿದೆ.
ನಿಂಬೆ ಹಣ್ಣು ಮಾರಿಕೊಂಡು ಜೀವನ ನಡೆಸುತಿದ್ದ ಮೃತ ವ್ಯಕ್ತಿ. ಕೆ ಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೌಡಿ ಶೀಟರ್ ಮಾರ್ಕೇಟ್ ವೇಲು, ದೇವರಾಜ್, ಶೇಖರ್ ಹಂತಕರು ಎನ್ನಲಾಗಿದೆ.
ಸರವಣ ವೆಂಕಟೇಶ ಮಚ್ಚಲ್ಲಿ ಹೊಡೆದಿದ್ದಾನಂತೆ. ಫುಟ್ ಪಾತ್ ವಿಚಾರಕ್ಕೆ ಮತ್ತು ಬಡ್ಡಿ ವ್ಯವಹಾರದ ದ್ವೇಷದ ಹಿನ್ನೆಲೆ ಕೊಲೆ ನಡೆದಿದೆ.
ಎರಡು ತಿಂಗಳ ಹಿಂದೆ ಕೆ ಆರ್ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿತ್ತು. ಜೈಲಿಂದ ಆಚೆ ಬಂದ್ರು ಭರತ್ ಮಾರ್ಕೆಟ್ ಗೆ ಬಂದಿರಲಿಲ್ಲ. ಟೀ ಕುಡಿಯಲು ಹೋದಾಗ ಐದು ಜನರ ಗ್ಯಾಂಗ್ ನಿಂದ ಹತ್ಯೆ ನಡೆದಿದೆ.