Webdunia - Bharat's app for daily news and videos

Install App

ಶಾಂತಿ, ಸುವ್ಯಸ್ಥೆ ಕಾಪಾಡಲು 4000 ಕ್ಯಾಮರಗಳ ಅಳವಡಿಕೆ

Webdunia
ಶುಕ್ರವಾರ, 16 ಡಿಸೆಂಬರ್ 2022 (20:48 IST)
ಸಿಲಿಕಾನ್ ಸಿಟಿಯಲ್ಲಿ ಅಕ್ರಮ ಹಾಗೂ ಗಡುವು ಮೀರಿ ಕಾರ್ಯನಿರ್ವಹಿಸುವ ಕ್ಲಬ್-ಪಬ್ ಹಾಗೂ ಇಸ್ಟೀಟ್ ಅಡ್ಡೆಗಳನ್ನು‌ ಮುಲಾಜಿಲ್ಲದೆ ಮುಚ್ಚಬೇಕು,ಅಕ್ರಮ‌ ಎಸಗುವ ಯಾವುದೇ ಪೋಲಿಸರನ್ನ‌ ಕ್ಷಮಿಸೋ ಮಾತೇಯಿಲ್ಲ. ನಮ್ಮ ರಾಜ್ಯದ ಪೊಲೀಸರ ಕಾರ್ಯ ದಕ್ಷತೆ ಬಗ್ಗೆ ಹೆಮ್ಮೆಯಿದೆ ಎಂದು ಗೃಹ ಸಚಿವರು ಶ್ಲಾಘನೆ ಮಾಡಿದ್ರು.
ನಗರದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಬ್, ಪಬ್ ಹಾಗೂ ಇಸ್ಟೀಟ್ ಅಡ್ಡೆಗಳಿದ್ದರೆ ಅಂತಹವುಗಳನ್ನು‌ ನಿರ್ದಾಕ್ಷಿಣ್ಯವಾಗಿ ಮುಚ್ಚಿಸುವಂತೆ ಸೂಚಿಸಿದ್ದೇನೆ. ‌ಇತ್ತೀಚಿನ ದಿನಗಳಲ್ಲಿ ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕ್ಯೂ ಆರ್ ಕೋಡ್ ಮೂಲಕ ಲಂಚ ಸ್ವೀಕಾರ ಸೇರಿದಂತೆ ಆರೋಪಿಗಳೊಡನೆ ಪೊಲೀಸರು ಕೈ ಜೋಡಿಸುತ್ತಿರುವುದು ಗಮನಕ್ಕೆ ಬಂದಿದ್ದು ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಯಾರನ್ನು ತಿಪ್ಪೆಸಾರಿಸುವ ಕೆಲಸ ಮಾಡುವುದಿಲ್ಲ .ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಪೊಲೀಸರು ಸೇರಿ 107 ಮಂದಿ ಆರೋಪಿಗಳನ್ನು‌ ಬಂಧಿಸಲಾಗಿದೆ. ಎಂದರು.ಅಮೃತ್ ಪೌಲ್‌ ನಮ್ಮ ದಾಯಾದಿಯಲ್ಲ. ಯಾರೇ ತಪ್ಪು ಮಾಡಿದ್ರು ಕ್ಷಮಿಸುವ ಪ್ರಶ್ನೆಯೇಯಿಲ್ಲ.

ಪಿಎಸ್ ಐ ಪ್ರಕರಣದಲ್ಲಿ ಯಾರೇ ಪ್ರಭಾವಿಗಳು ಭಾಗಿಯಾಗಿರುವುದು ಸಾಕ್ಷ್ಯ ಲಭಿಸಿದರೆ ಅವರನ್ನ ಬಂಧಿಸಲಾಗುವುದು. ಅಲ್ಲದೆ‌ ಅಮ್ರಿತ್ ಪಾಲ್ ನಿರಾಪರಾಧಿ ಎಂದು ನಿರೂಪಿಸುವ ದಾಖಲಾತಿಗಳಿದ್ದರೆ ತನಿಖಾಧಿಕಾರಿಗಳ‌ ಮುಂದೆ ಹಾಜರುಪಡಿಸಲಿ ಹಾಗೇಯೇ ಚಿಲುಮೆ ಕೇಸ್ ನಲ್ಲಿ ಈಗಾಗಲೇ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಮ್ಮ‌‌  ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು  ಅವರನ್ನು ಹಳದಿ ಕಣ್ಣಿನಲ್ಲಿ‌ ನೋಡುವುದಿಲ್ಲ ಎಂದರು.ಈ ವರ್ಷ 22 ರೌಡಿಗಳನ್ನು ಹಾಗೂ 8 ಮಂದಿ ಮಾದಕ ವಸ್ತುಗಳ ವ್ಯಾಪಾರಿಗಳನ್ನು ಬಂಧಿಸಲಾಗಿದೆ. 2022ರಲ್ಲಿ  77 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ಜಪ್ತಿ‌‌ ಮಾಡಲಾಗಿದೆ. 69 ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ. ಪೊಲೀಸ್ ಬಲವರ್ಧನೆಗಾಗಿ 4 ಸಂಚಾರ ಠಾಣೆ,  ಎರಡು ಹೊಸ ಕಾನೂನು ಸುವ್ಯವಸ್ಥೆ ಉಪವಿಭಾಗಳನ್ನು ತೆರೆಯಲಾಗಿದೆ.ಸೇಫ್ ಸಿಟಿ ಯೋಜನೆಯಡಿ 657 ಕೋಟಿ 4 ಸಾವಿರ ಕ್ಯಾಮರ ಅಳವಡಿಕೆ ಕಾರ್ಯ ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗುವುದು.

 ಮೊಬೈಲ್ ಫಾರೆನ್ಸಿಕ್ ವ್ಯಾನ್ ಮತ್ತು ಎಫ್ ಎಸ್ಎಲ್ ಬಲವರ್ಧನೆಗೊಳಿಸಲಾಗುತ್ತಿದೆ‌. ಡಿಜಿಟಲ್ ನಿಸ್ತಂತು 23 ಕೋಟಿ ವೆಚ್ಚದಲ್ಲಿ‌ ಜನವರಿ 2023ಯೊಳಗೆ ಕಾರ್ಯಗತಗೊಳಿಸಲಾಗುವುದು ಎಂದರು.ಐಟಿಎಂಎಸ್ ನಡಿ 20 ಕೋಟಿ ವೆಚ್ಚದಲ್ಲಿ 50 ಜಂಕ್ಷನ್ ಗಳಲ್ಲಿ 250 ಕ್ಯಾಮರ ಮತ್ತು 80 ಆರ್ ಎಲ್ ವಿಡಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸಿಗ್ನಲ್ ಸಿಂಕ್ರನೈಜೇಷನ್ ನಡಿ 58 ಕೋಟಿ ವೆಚ್ಚದಲ್ಲಿ 200 ಜಂಕ್ಷನ್ ಗಳಲ್ಲಿ 7 ಹೈ ಡೆನ್ಸಿಟಿ ಕಾರಿಡಾರ್ ಗಳಲ್ಲಿ ಕಾರ್ಯಗತಗೊಳಿಸಲಾಗಿದೆ ಎಂದರು.ಸಭೆಯಲ್ಲಿ ಸಭೆಯಲ್ಲಿ‌ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಸ್ಪೆಷಲ್ ಕಮೀಷನರ್ ಎಂ.ಎ.ಸಲೀಂ‌ ಹಾಗೂ ಹಿರಿಯ ಅಧಿಕಾರಿಗಳು ಎಸಿಪಿ ದರ್ಜೆ ಅಧಿಕಾರಿಗಳು ಭಾಗಿಯಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ