Publish Date: Tue, 26 May 2020 (09:01 IST)
Updated Date: Tue, 26 May 2020 (09:05 IST)
ಬಳ್ಳಾರಿ : ಬಳ್ಳಾರಿ ಜಿಲ್ಲೆಯಲ್ಲಿ ಮೊದಲಬಾರಿಗೆ ಕೊರೊನಾ ವಾರಿಯರ್ಸ್ ಗೆ ಸೋಂಕು ತಗುಲಿದೆ ಎಂಬುದಾಗಿ ತಿಳಿದುಬಂದಿದೆ.
ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 36 ವರ್ಷದ ನರ್ಸ್ ವೊಬ್ಬರಿಗೆ ಇದೀಗ ಸೋಂಕು ಇರುವುದು ದೃಢಪಟ್ಟಿದೆ. ಆಸ್ಪತ್ರೆಯ ವೈದ್ಯರು ಸೇರಿ 15 ಸಿಬ್ಬಂದಿಗಳನ್ನು ಕೊವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ. ಅದರಲ್ಲಿ 15 ಸಿಬ್ಬಂದಿಗಳ ಪೈಕಿ ಒಬ್ಬ ನರ್ಸ್ ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೊವಿಡ್ ಆಸ್ಪತ್ರೆಯಲ್ಲಿ ಸೋಂಕಿತ ನರ್ಸ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.