Publish Date: Thu, 23 Mar 2023 (14:30 IST)
Updated Date: Thu, 23 Mar 2023 (13:45 IST)
ಇಂದೂ ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಡೌಟ್ ಎನ್ನಲಾಗಿದೆ. ಬಂಡಾಯ ಭೀತಿ ಹಿನ್ನೆಲೆ ಹೈಕಮಾಂಡ್ ಪಟ್ಟಿಗೆ ತಡೆಯೊಡ್ಡಿದ್ದಾರೆ. ಅಂತಿಮ ಕ್ಷಣದಲ್ಲಿ ಪಟ್ಟಿ ಬಿಡುಗಡೆಗೆ ಹೈಕಮಾಂಡ್ ಕೊಕ್ಕೆ ಹಾಕಿದೆ. ಎಲೆಕ್ಷನ್ ಕಮಿಟಿ 65 ಕ್ಷೇತ್ರಗಳಿಗೆ ಸಿಂಗಲ್ ಕ್ಯಾಂಡಿಡೇಟ್ ನೇಮ್ ಹಾಗೂ 65 ಕ್ಷೇತ್ರಗಳಿಗೆ ಡಬಲ್ ನೇಮ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಟಿಕೆಟ್ ಲಿಸ್ಟ್ ಬಿಡುಗಡೆಗೆ ಮೀನಾಮೇಷವೆಣಿಸುತ್ತಿದೆ.. ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ, KPCC ಅಧ್ಯಕ್ಷ D.K. ಶಿವಕುಮಾರ್, ಮಾಜಿ ಡಿಸಿಎಂ ಡಾ.G. ಪರಮೇಶ್ವರ್ ಹೆಣಗಾಡುತ್ತಿದ್ದಾರೆ.