Publish Date: Thu, 23 Mar 2023 (08:25 IST)
Updated Date: Thu, 23 Mar 2023 (08:27 IST)
ಬೆಂಗಳೂರು : ಕ್ಷೇತ್ರ ಆಯ್ಕೆಯ ಗೊಂದಲದಲ್ಲಿರುವ ಸಿದ್ದರಾಮಯ್ಯ ಪರಿಹಾರ ಹುಡುಕಲು ಇದೇ ಮೊದಲ ಬಾರಿಗೆ ಕುಟುಂಬಸ್ಥರ ಮೊರೆ ಹೋಗಿದ್ದಾರೆ.
ಪತ್ನಿ ಪಾರ್ವತಿ ಹಾಗೂ ಪುತ್ರ ಯತೀಂದ್ರರ ಅಭಿಪ್ರಾಯ ಕೇಳಿದ್ದಾರೆ. ಇಬ್ಬರು ನೀಡಿದ ವಿಭಿನ್ನ ಸಲಹೆಗಳು ಸಿದ್ದರಾಮಯ್ಯರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ.
ಸಿದ್ದರಾಮಯ್ಯ ಪತ್ನಿ ಸಲಹೆ ಕೇಳಲು ಕಾರಣವೂ ಇದೆ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿಸ್ಪರ್ಧಿಸಬೇಡಿ. ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿ ಎಂದು ಪತ್ನಿ ಸಲಹೆ ಕೊಟ್ಟಿದ್ದರು. ಆದರೆ ಈ ಸಲಹೆ ಪರಿಗಣಿಸದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ನ ಜಿಟಿ ದೇವೇಗೌಡ ವಿರುದ್ಧ ನಿಂತು ಸೋಲನ್ನು ಅನುಭವಿಸಿದ್ದರು.
ಪತ್ನಿ ಹೇಳಿದ್ದೇನು?
ವರುಣಾಗೆ ಹೋಗಿ ಮಗನ ಭವಿಷ್ಯ ಹಾಳು ಮಾಡುವುದು ಸರಿಯಲ್ಲ. ಮಗನ ರಾಜಕೀಯ ಭವಿಷ್ಯ ಒಮ್ಮೆ ಬಿದ್ದರೆ ಮತ್ತೆ ಏಳುವುದು. ಹೀಗಾಗಿ ವರುಣಾದಲ್ಲಿ ಮಗನನ್ನು ಗೆಲ್ಲಿಸಿ ಒಂದು ಅವಧಿಗೆ ಮಂತ್ರಿ ಮಾಡಿ. ನೀವು ಕೋಲಾರಕ್ಕೆ ಹೋದರೆ ಗೆಲ್ಲಬಹುದು ಎಂದು ಪತ್ನಿ ಪಾರ್ವತಿ ಸಲಹೆ ನೀಡಿದ್ದಾರೆ.