Select Your Language

Notifications

webdunia
webdunia
webdunia
webdunia

ಇಂದಿರಾ ಗಾಂಧಿ ಬಡವರ ತಾಯಿಯಲ್ಲ. ಅವರು ವೋಟಿನ ತಾಯಿ; ಬಿಜೆಪಿ

indira gandi
bangalore , ಸೋಮವಾರ, 30 ಅಕ್ಟೋಬರ್ 2023 (19:04 IST)
ಇಂದಿರಾ ಗಾಂಧಿ ಬಡವರ ತಾಯಿಯಲ್ಲ. ಅವರು ವೋಟಿನ ತಾಯಿ ಅಂತಾ ಈಗ ಎಲ್ಲರಿಗೂ ಅರಿವಾಗಿದೆ. ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಬಯಲಾಗಿದೆ ಎಂದು ಮಾಜಿ ಸಚಿವ ಗೋವಿಂದ್ ಕಾರಜೋಳ ಆರೋಪಿಸಿದರು.
 
ಕಾಂಗ್ರೆಸ್ ನಕಲಿ ಜಾತ್ಯಾತೀತ ಪಕ್ಷ. ಕೇವಲ ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾಂತರು, ಹಿಂದಳಿದ ವರ್ಗ ಹಾಗೂ ದಲಿತರ ಮೂಗಿಗೆ ತುಪ್ಪ ಸವರುತ್ತ ಬಂದಿದೆ ಎಂದು ಮಾಜಿ ಸಚಿವ ಗೋವಿಂದ್ ಕಾರಜೋಳ ಕಿಡಿಕಾರಿದ್ದಾರೆ.
 
ಬೆಂಗಳೂರು ನಗರ ಜಿಲ್ಲಾ ಎಸ್‌ಸಿ-ಎಸ್‌ಟಿ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಕೋಮು ಭಾವನೆ ಕೆರಳಿಸಿ ಧರ್ಮಗಳ ಮಧ್ಯ ಒಡಕು ಉಂಟು ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ಲೇವಡಿ ಮಾಡಿದರು.
 
ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಯಾರಾದರು ಉದ್ಧಾರವಾಗಿದ್ದಾರೆಂದರೆ ಅದು ಕಾಂಗ್ರೆಸ್ ಮಾತ್ರ. ದೀನದಲಿತರು ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬರುವ ಇವರು, ಈ ಸಮುದಾಯದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ದೇವೇಗೌಡ