Select Your Language

Notifications

webdunia
webdunia
webdunia
webdunia

ಭಾರತೀಯ ಸಂಸ್ಕೃತಿ ಹಾಗೂ ಪುರಾತನ ಭಾಷೆಯಾದ ಸಂಸ್ಕೃತ ಒಂದಕ್ಕೊಂದು ನಿಕಟ ಸಂಬಂಧ

ಭಾರತೀಯ ಸಂಸ್ಕೃತಿ ಹಾಗೂ ಪುರಾತನ ಭಾಷೆಯಾದ ಸಂಸ್ಕೃತ ಒಂದಕ್ಕೊಂದು ನಿಕಟ ಸಂಬಂಧ
bangalore , ಗುರುವಾರ, 9 ಸೆಪ್ಟಂಬರ್ 2021 (22:00 IST)
ಭಾರತೀಯ ಸಂಸ್ಕೃತಿ ಹಾಗೂ ಪುರಾತನ ಭಾಷೆಯಾದ ಸಂಸ್ಕೃತ ಒಂದಕ್ಕೊಂದು ನಿಕಟ ಸಂಬಂಧ ಹೊಂದಿವೆ. ದೇಶದ ಸಂಸ್ಕೃತಿ ಸುಭದ್ರಗೊಳ್ಳಬೇಕಾದರೆ ಸಂಸ್ಕೃತದ ಪ್ರಚಾರ ನಡೆಯಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು. 
 
 
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಗುರುವಾರ ಹಮ್ಮಿಕೊಂಡ ಸಮಾರಂಭದಲ್ಲಿ ಸಂಸ್ಕೃತ ಮಹೋತ್ಸವವನ್ನು ಉದ್ಘಾಟಿಸಿದ ಅವರು, ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 15 ಮಂದಿಗೆ ಸಂಸ್ಕೃತ ಗ್ರಂಥ ಪುರಸ್ಕಾರ ಪ್ರದಾನ ಮಾಡಿದರು. 
 
ಸಂಸ್ಕೃತವು ವಿಶ್ವದ ಹಲವು ಭಾಷೆಗಳ ತಾಯಿ. ಹೇರಳ ಭಾಷಾ ಸಂಪನ್ಮೂಲವನ್ನು ಹೊಂದಿರುವ ಸಂಸ್ಕೃತವನ್ನು ಸಂಕುಚಿತ ದೃಷ್ಟಿಕೋನದಿಂದ ನೋಡುವ ಮನೋಭಾವ ತೊಲಗಬೇಕು. ಭಾಷೆಯು ಸರ್ವವ್ಯಾಪಿ, ಸರ್ವಸ್ಪರ್ಶಿಯಾದಲ್ಲಿ ದೇಶದ ಸಂಸ್ಕೃತಿಯೂ ಶ್ರೀಮಂತಗೊಳ್ಳುತ್ತದೆ. ಹಾಗಾಗಿ, ಈ ಭಾಷೆಯ ಪ್ರಸಾರಕ್ಕೆ ವಿದ್ವಾಂಸರು ಹಾಗೂ ವಿಶ್ವವಿದ್ಯಾಲಯ ಶ್ರಮಿಸಬೇಕು ಎಂದರು. 
 
 
ಸಂಸ್ಕೃತವು ಪರಿಪೂರ್ಣ ವ್ಯಾಕರಣವನ್ನು ಹೊಂದಿದೆ. ಕಂಪ್ಯೂಟರ್‌ ಭಾಷೆಗಳನ್ನು ಅಭಿವೃದ್ಧಿಪಡಿಸುವಲ್ಲಿಯೂ ಈ ಭಾಷೆ ನೆರವಾಗಿದೆ.  ವಸುದೈವ ಕುಟುಂಬಕಂ ಪರಿಕಲ್ಪನೆಯ ಹಿಂದೆಯೂ ಈ ಭಾಷೆಯ ಪ್ರಭಾವವಿದೆ. ಈ ಭಾಷೆ ಹಾಗೂ ಸಂಸ್ಕೃತಿಯ ಪ್ರಸಾರಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ. ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಲಿವೆ’ ಎಂದು ತಿಳಿಸಿದರು. 
 
ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಭಟ್ ಕೋಟೆಮನೆ, ಸರ್ವರ ಕಲ್ಯಾಣ ಸಂಸ್ಕೃತದ ಆಶಯ. ಕನ್ನಡದ ವೈಜ್ಞಾನಿಕ ಹಾಗೂ ವೈಚಾರಿಕ ಸಾಹಿತ್ಯಕ್ಕೆ ಸಂಸ್ಕೃತದ ಕೊಡುಗೆ ಮಹತ್ವದ್ದು. ಸಂಸ್ಕೃತ ವಿಶ್ವವಿದ್ಯಾಲಯವು ಬೋಧನೆಯ ಜೊತೆಗೆ ಸಂಶೋಧನೆಯನ್ನೂ ಕೈಗೊಳ್ಳಬೇಕು ಎಂದು ಹೇಳಿದರು. 
 
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಇ. ದೇವನಾಥನ್, ‘ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶನದಂತೆ ವಿಶ್ವವಿದ್ಯಾಲಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು
collage

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ವಾರಾಂತ್ಯದ ಕರ್ಪ್ಯೂ ತೆರವು