Publish Date: Wed, 07 Sep 2022 (20:12 IST)
Updated Date: Wed, 07 Sep 2022 (20:18 IST)
ಕರ್ನಾಟಕ ಲೋಕ ಸೇವಾ ಆಯೋಗವು 2017 - 2018 ರಲ್ಲಿ ನಡೆಸಿದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಕರೆದಿತ್ತು.ಈ ಪರೀಕ್ಷೆಯಲ್ಲಿ ಇಂಡಿಯಾ 4 ಐ ಎಸ್ ಎಸ್ ಅಕಾಡಮಿ ವತಿಯಿಂದ ಸುಮಾರು 106 ವಿದ್ಯಾರ್ಥಿಗಳು ತರಬೇತಿ ಪಡೆದು ಪರೀಕ್ಷೆ ಬರೆದು 64 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಸೆಪ್ಟೆಂಬರ್ 05 ನೇ ತಾರೀಖು ಈ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ.ಈ ಅಕಾಡಮಿಯಿಂದ ಈ ಬಾರಿ 64 ವಿಧ್ಯಾರ್ಥಿಗಳು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.106 ಪೋಸ್ಟ್ ಗಳಲ್ಲಿ 64 ಜನ ತೇರ್ಗಡೆ ಹೊಂದಿದ್ದಾರೆ.
ಇನ್ನು ಇವರಲ್ಲಿ ಹಲವರು ಅಸಿಸ್ಟಂಟ್ ಕಮಿಷನರ್, ತಹಸೀಲ್ದಾರ್ ಮತ್ತು ಸಹಕಾರ ಇಲಾಖೆಗೆ ಆಯ್ಕೆಯಾಗಿದ್ದಾರೆ.ಇಂಥ ಒಳ್ಳೆಯ ಅಕಾಡಮಿಯಿಂದ ಇವ್ರು ಪಾಸಾಗಿ ತಮ್ಮ ಜೀವನ ಪ್ರಾರಂಭ ಮಾಡುತ್ತಿರುವುದು ಸಂತೋಷದ ಸಂಗತಿ.ಮುಂದಿನ ದಿನಗಳಲ್ಲಿ ಇವರು ಐ ಎ ಎಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿಗಳಾಗಿ ಹೊರಬರಲಿ ಎಂದು ನಿವೃತ್ತ ಐ ಎಫ್ ಎಸ್ ಅಧಿಕಾರಿ ಶ್ರೀ ಕಂಠಯ್ಯ ಪರಾಗ ಹೋಟೆಲ್ ನಲ್ಲಿ ನಡೆದ ಸುದ್ಧಿಗೋಷ್ಠಿ ಹೇಳಿದ್ದಾರೆ