Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯೋತ್ಸವ: ರಾಷ್ಟ್ರರಾಜಧಾನಿಯಲ್ಲಿ ಹೈ ಅಲರ್ಟ್​

ಸೇನಾ ಸಮವಸ್ತ್ರ
ನವದೆಹಲಿ , ಮಂಗಳವಾರ, 14 ಆಗಸ್ಟ್ 2018 (17:14 IST)
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ಸೇರಿದಂತೆ ಪ್ರಮುಖ ಮಹಾನಗರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಸ್ವಾತಂತ್ರ್ಯದಿನಾಚರಣೆಗೂ ಒಂದು ದಿನ ಮೊದಲೇ ನವದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕನ್ನಾಟ್ ಪ್ರದೇಶದಲ್ಲಿ ವಾಯುಪಡೆಯ ಸಮವಸ್ತ್ರದಲ್ಲಿ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.  ವಾಯುಪಡೆಯ ಶೂ ಬದಲಿಗೆ ಕಾಲಿಗೆ ಕ್ರೀಡಾ ಕ್ರೀಡಾ ಶೂ ಧರಿಸಿದ್ದ. ಅಲ್ಲದೇ ಆ ವ್ಯಕ್ತಿಯ ಅನುಮಾನಾಸ್ಪದ ವರ್ತನೆಯನ್ನು  ಸೇನಾ ಪಡೆಯ ನಿವೃತ್ತ ಯೋಧರು ಗಮನಿಸಿದರು. 

ವಾಯುಪಡೆಯ ಸಮವಸ್ತ್ರದಲ್ಲಿ ಅನುಮಾನಾಸ್ಪದವಾಗಿ ಕಂಡ ವ್ಯಕ್ತಿಯ ಪತ್ತೆಗೆ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಎಲ್ಲೆಡೆ ಶೋಧ ನಡೆಸಿದ್ದಾರೆ. ಈ ಅನುಮಾನಾಸ್ಪದ ವ್ಯಕ್ತಿ  ರಾಜೀವ್ ಚೌಕ್ ಮೆಟ್ರೊ ಬಳಿ ಓಡಾಡಿದ್ದಾನೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾದಿನ ಅನುಮಾನಾಸ್ಪದ ವ್ಯಕ್ತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮೃತರ ಆತ್ಮಕ್ಕೆ ವಿಭಿನ್ನವಾಗಿ ಶಾಂತಿಕೋರಿದ ಯುವಕರು