Select Your Language

Notifications

webdunia
webdunia
webdunia
webdunia

ರುಸ್ತುಂ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಧರಿಸಿದ್ದ ಸೇನಾ ಸಮವಸ್ತ್ರ ಹರಾಜನ್ನು ವಿರೋಧಿಸಲು ಕಾರಣವೇನು?

ರುಸ್ತುಂ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಧರಿಸಿದ್ದ ಸೇನಾ ಸಮವಸ್ತ್ರ ಹರಾಜನ್ನು ವಿರೋಧಿಸಲು ಕಾರಣವೇನು?
ಬೆಂಗಳೂರು , ಶುಕ್ರವಾರ, 11 ಮೇ 2018 (13:29 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 'ರುಸ್ತುಂ' ಚಿತ್ರದಲ್ಲಿ ತಾವು ಧರಿಸಿದ್ದ ಸೇನಾ ಸಮವಸ್ತ್ರವನ್ನು ಹರಾಜು ಮಾಡಲು ಮುಂದಾಗಿದ್ದು, ಇದೀಗ ಈ ಕಾರ್ಯಕ್ಕೆ ವಿರೋಧ ವ್ಯಕ್ತವಾಗಿದೆ.
'ರುಸ್ತುಂ' ಚಿತ್ರದಲ್ಲಿ ಅಕ್ಷಯ್ ಕುಮಾರ್ ನೌಕಾದಳದ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾದಲ್ಲಿ ಅವರು ಧರಿಸಿದ್ದ ಸಮವಸ್ತ್ರ ಸೇನಾ ನಿಯಮಾವಳಿಗಳಂತೆ ಇಲ್ಲ ಎಂದು ಹಲವರು ಟೀಕಿಸಿದ್ದರು. ಇದಾದನಂತರ ನಟ ಅಕ್ಷಯ್ ಕುಮಾರ್ ಹಾಗೂ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು  ಸಾಮಾಜಿಕ ಕಾರ್ಯವೊಂದನ್ನು ಕೈಗೊಳ್ಳಲು ಅಕ್ಷಯ್ ಅವರು ಧರಿಸಿದ್ದ ಸಮವಸ್ತ್ರವನ್ನು ಹರಾಜು ಮಾಡುವುದಾಗಿ ಎಂದು ಪ್ರಕಟಿಸಿದ್ದರು.
 
 ಪಠಾಣ್ ಕೋಟ್ ಸೇನಾ ನೆಲೆ ಮೇಲೆ ಉಗ್ರರು ಸೇನಾ ಸಮವಸ್ತ್ರ ಧರಿಸಿ ದಾಳಿ ನಡೆಸಿದ ಬಳಿಕ ದೇಶಾದ್ಯಂತ ಸೇನಾ ಸಮವಸ್ತ್ರ ಧರಿಸುವುದು ಹಾಗೂ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲಾಗಿರುವ ಹಿನ್ನಲೆಯಲ್ಲಿ ಇದೀಗ ಈ ಹರಾಜಿಗೆ ವಿರೋಧ ವ್ಯಕ್ತವಾಗಿದ್ದು, ಅಕ್ಷಯ್ ಕುಮಾರ್ ಅವರಿಗೆ  ಈ ಬಗ್ಗೆ ಲೀಗಲ್ ನೋಟೀಸ್ ಕೂಡ  ನೀಡಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹೆಸರು ಬದಲಾಯಿಸಿಕೊಂಡ ನವವಧು ನಟಿ ಸೋನಂ ಕಪೂರ್