ಸಿಲಿಕಾನ್ ಸಿಟಿ ಸ್ಮಾರ್ಟ್ ಸಿಟಿಯಾಗ್ತಿದಂತೆ ನಗರದಲ್ಲಿ ಮರಗಳ ಮರಣಹೋಮ ನಡೆಯುತ್ತಿತ್ತು. ಪರಿಸರವನ್ನ ಉಳಿಸಿ ಬೆಳಸಬೇಕಾದ ಜನರು ಮಟ್ರೋ ಕಾಮಗಾರಿಗಾಗಿ , ಇನ್ನಿತರ ಕಾರಣಗಳಿಗಾಗಿ ಮರಗಳನ್ನ ಕಡಿಯುವ ಕೆಲಸ ಮಾಡ್ತಿದ್ರು. ಆದ್ರೆ ಈಗ ಎಚ್ಚೇತ್ತ ಜನರು ಪರಿಸರ ದಿನಾಚರಣೆಯ ಪ್ರಯುಕ್ತ ನಗರದಲ್ಲಿ ಗಿಡಗಳನ್ನ ಬೆಳೆಸುವ ಕೆಲಸ ಮಾಡ್ತಿದ್ದಾರೆ. ಅಷ್ಟೇ ಅಲ್ಲದೆ ಎಲೆಕ್ಟ್ರಾನಿಕ್ ವಾಹನಗಳ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ.ಬೆಂಗಳೂರಿನಂತಹ ಮಹಾನಗರದಲ್ಲಿ ಜನರು ಪ್ರತಿ ಮನೆಗಳಲ್ಲಿ ಎರಡು - ಮೂರು ವಾಹನಗಳನ್ನ ಇಟ್ಟುಕೊಂಡಿರುತ್ತಾರೆ. ಏನಿಲ್ಲ ಅಂದ್ರು ಕಡೆ ಪಕ್ಷ ಒಂದಾದ್ರು ವಾಹನವನ್ನ ಇಟ್ಟುಕೊಂಡಿರುತ್ತಾರೆ. ಹೀಗೆ ಮನೆಗೆ ಒಂದರಂತೆ ವಾಹನಗಳನ್ನ ಇಟ್ಟುಕೊಂಡಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತೆ. ಜೊತೆಗೆ ಈಗ ಪೆಟ್ರೋಲ್ -ಡಿಸೇಲ್ ಬೆಲೆ ಕೂಡ ಗಗನಕ್ಕೇರಿದೆ. ಆದ್ದರಿಂದಲೂ ವಾಹನಸವಾರರಿಗೆ ಕಷ್ಟವಾಗುತ್ತೆ. ಈ ಎಲ್ಲಾ ಕಾರಣಗಳಿಂದ ಪರಿಸರ ಮಾಲಿನ್ಯ ಉಂಟಾಗ್ತಿದೆ.. ಆದ್ರೆ ಈ ರೀತಿ ಮಾಲಿನ್ಯ ಉಂಟಾಗದಂತೆ ಜನರು ಎಚ್ಚೇತ್ತುಕೊಂಡು ಎಲೆಕ್ಟ್ರಾನಿಕ್ ವಾಹನಗಳನ್ನ ಹೆಚ್ಚಾಗಿ ಬಳಸಲು ಮುಂದಾಗ್ತಿದ್ದಾರೆ.
ನಗರವನ್ನ ಹೊಗೆ ಮುಕ್ತವನ್ನಾಗಿ ಮಾಡಲು ಇ ಎನ್ ವಿ ಐ ಸೇರಿದಂತೆ ಕೆಲವೊಂದು ಕಂಪನಿಗಳು ಎಲೆಕ್ಟ್ರಾನಿಕ್ ವಾಹನಗಳನ್ನ ಪರಿಚಯಿಸಿದ್ದಾರೆ. ಆಟೋ, ಕಾರು , ಬೈಕ್ ಹೀಗೆ ಎಲೆಕ್ಟ್ರಾನಿಕ್ ವಾಹನಗಳು ರಸ್ತೆಗೆ ಲಗ್ಗೆ ಇಟ್ಟಿದೆ. ಈಗಾಗಲ್ಲೇ 100 ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಕಾರುಗಳು ರಸ್ತೆಯಲ್ಲಿ ಓಡಾಡುತ್ತಿದ್ದು, ಇನ್ನು ಹೆಚ್ಚಿನ ವಾಹನಗಳನ್ನ ಜನರಿಗಾಗಿ ಬಿಡುವ ಚಿಂತನೆಯಲ್ಲಿ ಕಂಪನಿಗಳು ಇದೆ. ಈ ಎಲೆಕ್ಟ್ರಾನಿಕ್ ವಾಹನಗಳಿಗೆ ಈಗ ಬೇಡಿಕೆ ಹೆಚ್ಚಿದೆ. ವಾಹನಸವಾರರು ಎಲೆಕ್ಟ್ರಾನಿಕ್ ವಾಹನಗಳನ್ನ ಹೆಚ್ಚು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇತ್ತ ಜನರು ಕೂಡ ಎಲೆಕ್ಟ್ರಾನಿಕ್ ವಾಹನಗಳನ್ನೇ ಹೆಚ್ಚು ಇಷ್ಟಪಾಟ್ತಿದ್ದಾರೆ.ವಿಶ್ವಪರಿಸರ ದಿನಾಚರಣೆಯ ಪ್ರಯುಕ್ತ ಗಿಡಗಳನ್ನ ನೆಡುವ ಮೂಲಕ ಜನರು ಜಾಗೃತಿ ಮೂಡಿಸಿದ್ರು. ಪ್ರತಿದಿನ ಹೀಗೆ ಗಿಡ- ಮರಗಳನ್ನ ಬೆಳೆಸುತ್ತಿದ್ರೆ ಪರಿಸರ ಮಾಲಿನ್ಯವಾಗುವುದನ್ನ ತಡೆಯಬಹುದು.