Select Your Language

Notifications

webdunia
webdunia
webdunia
webdunia

ಆರ್ ಟಿ ಇ ಸೀಟುಗಳಿಗೆ ತಗ್ಗಿದ ಬೇಡಿಕೆ

ಆರ್ ಟಿ ಇ ಸೀಟುಗಳಿಗೆ ತಗ್ಗಿದ ಬೇಡಿಕೆ
bangalore , ಭಾನುವಾರ, 5 ಜೂನ್ 2022 (20:52 IST)
ಒಂದು ಕಾಲದಲ್ಲಿ ಆರ್ ಟಿ ಇ ಸೀಟ್ ಸಿಗುವುದೇ ಭಾಗ್ಯ ಅಂತಿದ್ರು. ಆರ್ ಟಿ ಇ ಸೀಟ್ ಸಿಕ್ರೆ ಸಾಕಪ್ಪ ಅಂತಾ ಕ್ಯೂ ನಲ್ಲಿ ನಿಂತು ಕಾಯ್ತಿದ್ರು. ಆದರೆ ಈಗ ಆರ್ ಟಿಇ ಸೀಟ್ ಸಿಕ್ರು ಮಕ್ಕಳನ್ನ ಅಡ್ಮೀಷನ್ ಮಾಡಿಸುವುದಕ್ಕೆ ಹೆಚ್ಚುವರಿ ಮೀನಾಮೇಷ ಏಣಿಸುತ್ತಿದ್ದಾರೆ. ಆರ್ ಟಿ ಐ ಅಡಿಯಲ್ಲಿ ತಮ್ಮ ಮಕ್ಕಳ ಶಾಲೆಗೆ ಸೇರಿಸಲು ಹಿಂದೇಟು ಹಾಕಿದ್ದಾರೆ. ಆದರೆ ಈಗ ಆರ್ ಟಿ ಐ ಅಡಿಯಲ್ಲಿ ಮಕ್ಕಳಿಗೆ ಸೀಟ್ ಸಿಕ್ರು ಹೆಚ್ಚುವರಿ ಆಡ್ಮೀಷನ್ ಮಾಡಿಸಲ್ಲ ಅಂತಾ ಹಿಂದೇಟು ಹಾಕಿದ್ದಾರೆ. ಅಂದಹಾಗೆ ಸರ್ಕಾರ ಅನುದಾನಿತ ಶಾಲೆಗಳನ್ನು ಆರ್ ಟಿಐ ವ್ಯಾಪ್ತಿಗೆ ತಂದ ನಂತರ ಸೀಟುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಪೂರಕ ಮನೆ ಹತ್ತಿರದಲ್ಲಿಯೇ ಮಕ್ಕಳನ್ನ ಶಾಲೆಗೆ ಸೇರಿಸಲು ನಿರ್ಧಾರ ಮಾಡಬೇಕಾಗಿರುತ್ತದೆ. ಈ ಎರಡು ಕಾರಣಗಳಿಂದ ಕಡ್ಡಾಯ ಆರ್ ಟಿ ಐ ಅಡಿಯಲ್ಲಿ ಮಕ್ಕಳ ಶಾಲೆಗೆ ಸೇರಿಸಲು ನಿರಾಕರಿಸುತ್ತಾರೆ.

ಈಗ ಸೇರಿಸಲಾಗಿದೆ ಆರ್ ಟಿ ಇ ಸೀಟ್ ಗಳು
 
ಒಟ್ಟು ಸೀಟುಗಳು 16, 824
 
ಸಲ್ಲಿಕೆಯಾದ ಅರ್ಜಿ 20, 414
 
ಪುರಸ್ಕೃತವಾದ ಅರ್ಜಿ 9953
 
ಪ್ರವೇಶ ಪಡೆದವರು 3844
ಈ ಬಾರಿ ಆರ್ ಟಿ ಅಡಿಯಲ್ಲಿ ಮಕ್ಕಳನ್ನ ಶಾಲೆಗೆ ಸೇರಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟಿ ಇ ಅಡಿ ಪ್ರವೇಶ ಪಡೆದ ಮಕ್ಕಳ ಶುಲ್ಕ ಸರ್ಕಾರವೇ ಭರಿಸುತ್ತಿತ್ತು. ಆದರೆ ಈಗ ವರ್ಷಗಳು ಕಳೆದಂತೆ ಖಾಸಗಿ ಶಾಲೆಗಳ ಮಕ್ಕಳ ಶುಲ್ಕ ಭರಿಸುವುದೇ ಸರ್ಕಾರಕ್ಕೆ ಹೊರೆಯಾಗಿದೆ. ಹೀಗಾಗಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು. ಇದರಿಂದ ಪೋಷಕರಿಗೆ ಬೇಸರವಾಗಿದೆ.ಮಕ್ಕಳಿಗೆ ಸೀಟು ಸಿಕ್ರು ಶಾಲೆಯ ವ್ಯವಸ್ಥೆ ನೋಡಿ ಪೋಷಕರ ಮಕ್ಕಳನ್ನ ಶಾಲೆಗೆ ಕಳಿಸಲ್ಲ ಅಂತಾ ನಿರಾಕರಣೆ ಮಾಡ್ತಿದ್ದಾರೆ. ಹೀಗಾಗಿ ನಗರದ ಖಾಸಗಿ ಶಾಲೆಯಲ್ಲಿ ಆರ್ ಟಿಐ ಸೀಟು ಖಾಲಿಯಾಗುತ್ತಿದೆ.ಸೀಟ್ ಇದ್ರು ಮಕ್ಕಳಿಗೆ ಮಾತ್ರ ಉಪಯೋಗವಿಲ್ಲ. ಇದ್ದರಿಂದ ಆ ಕಡೆ ಹಾವು ಸಾಯಬಾರದು ಈ ಕಡೆ ಕೊಲುಮುರಿಬಾರದು ಎಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪರ್ಧಾತ್ಮಕ ಪರೀಕ್ಷೆಗಳ‌ ಆಮಿಷವೊಡ್ಡಿ ಹೆಚ್ಚು ಶುಲ್ಕ ಹೇಳಿದ್ರೆ ಹುಷಾರ್..!