Select Your Language

Notifications

webdunia
webdunia
webdunia
webdunia

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನ ಸಂಪರ್ಕ ಕಛೇರಿ ಉದ್ಘಾಟನೆ

Inauguration of Public Relations Office of Congress Party of Rajajinagar Assembly Constituency
bangalore , ಗುರುವಾರ, 15 ಡಿಸೆಂಬರ್ 2022 (18:11 IST)
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಕಾಂಕ್ಷಿ ಮಾಜಿ ಉಪಮಹಾಪೌರರಾದ ಬಿ.ಎಸ್.ಪುಟ್ಟರಾಜುರವರ ಬಸವೇಶ್ವರನಗರದಲ್ಲಿ ಜನ ಸಂಪರ್ಕ ಕಛೇರಿ ಉದ್ಘಾಟನೆ ಸಮಾರಂಭ.
 
ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ರವರು,ಶಾಸಕರಾದ ದಿನೇಶ್ ಗುಂಡೂರಾವ್ ರವರು,ಮಾಜಿ ಉಪಮಹಾಪೌರರಾದ ಬಿ.ಎಸ್.ಪುಟ್ಟರಾಜುರವರು ಉದ್ಘಾಟನೆ ಮಾಡಿದರು.
 
ಮಾಜಿ ಉಪಮಹಾಪೌರರು, ಕಾಂಗ್ರೆಸ್ ಪಕ್ಷದ ಅಕಾಂಕ್ಷಿ ಬಿ.ಎಸ್.ಪುಟ್ಟರಾಜುರವರು ಮಾತನಾಡಿ ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯನಾಗಿ,ಉಪಮಹಾಪೌರನಾಗಿ ಬೆಂಗಳೂರುನಗರ ಅಭಿವೃದ್ದಿಗೆ ಶ್ರಮಿಸಿದ್ದೇನೆ.
 
 ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆ ಮತ್ತು ಕುಂದುಕೂರತೆ ಅಲಿಸಲು ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಜನಸಂಪರ್ಕ ಕಛೇರಿ ಆರಂಭಿಸಲಾಗಿದೆ.
 
ಕಾಂಗ್ರೆಸ್ ಪಕ್ಷ ಬಡವರ,ದೀನದಲಿತರ ಪರ ಹೋರಾಟ ಮಾಡುವ ಪಕ್ಷ.
ಕರ್ನಾಟಕದಲ್ಲಿ ಯುವ ನಾಯಕ ರಾಹುಲ್ ಗಾಂಧಿರವರು ಭಾರತಜೋಡೋ ಪಾದಯಾತ್ರೆಯಿಂದ ಹೊಸ ಹುರಪು ಮೂಡಿದೆ.
 
ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು, ಮಾಜಿ ಮುಖ್ಯಮಂತ್ರಿಗಳು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು ಹಾಗೂ ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾರೆಡ್ಡಿರವರ  ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಸಧೃಡವಾಗಿದೆ.
 
ಈ ಹಿಂದೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಜನತೆಗೆ ನೀಡಿದ 165ಭರವಸೆಗಳನ್ನು ಈಡೇರಿಸಿದ ದೇಶದ ಮೊಟ್ಟ ಮೊದಲ ಸರ್ಕಾರ ಕಾಂಗ್ರೆಸ್ ಪಕ್ಷದ ಸರ್ಕಾರ.
 
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಕಾಯಕ ಸಿದ್ದಾಂತವನ್ನು ಪರಿಪಾಲಿಸುವ ಕಾಂಗ್ರೆಸ್ ಪಕ್ಷ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಮನಸ್ಸಿನಿ ಹಲವಾರು ಯೋಜನೆಗಳನ್ನು ಆನುಷ್ಠಾನಗೊಳಿಸಿ ಬಡವರ ಪಾಲಿಗೆ ಆಶಾಕಿರಣವಾಯಿತು.
 
ಕಾಂಗ್ರೆಸ್ ಪಕ್ಷ ರಾಜಾಜಿನಗರ ಉತ್ತಮ ಸಂಘಟನೆಯಿಂದ ಕೂಡಿದೆ.2023ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಕಾಂಗ್ರೆಸ್ ಪಕ್ಷ ಅಧಿಕಾರಿ ಬರಲಿದೆ ಎಂದು ಹೇಳಿದರು.
 
 
ಮಾಜಿ ಶಾಸಕ ಬಾಲಕೃಷ್ಣ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಜಿ.ಕೃಷ್ಣಮೂರ್ತಿ,ಶ್ರೀಮತಿ ಮಂಜುಳ ವಿಜಯಕುಮಾರ್,ಮುರುಳಿ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇವೆ ಬಿಜೆಪಿಯ ಪರವಾಗಿ ಅಲೆ ರಾಜ್ಯದಲ್ಲಿದೆ- ಬಿಎಸ್ ವೈ