Publish Date: Fri, 05 Jun 2020 (18:02 IST)
Updated Date: Fri, 05 Jun 2020 (18:05 IST)
ಇಂದಿರಾ ಕ್ಯಾಂಟಿನ್ ಅನ್ನು ಬಿಜೆಪಿ ಸಚಿವರೊಬ್ಬರು ಉದ್ಘಾಟಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಅಂಕೋಲಾದಲ್ಲಿ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್‌ನ್ನು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಕ್ಕರೆ ಮತ್ತು ಕಾರ್ಮಿಕರ ಸಚಿವ ಶಿವರಾಂ ಹೆಬ್ಬಾರ್ ಉದ್ಘಾಟಿಸಿದ್ದಾರೆ.
ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ ಸಚಿವರು, ಯಾರೊಬ್ಬರು ಕೂಡಾ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ತಾಲೂಕಾ ಕೇಂದ್ರದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಿದೆ. ಸುಮಾರು 75 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ. ಅಗತ್ಯವಿದ್ದವರು ಈ ಕ್ಯಾಂಟಿನ್‌ನ ಸದ್ಬಳಕೆ ಮಾಡಿಕೊಳ್ಳಬೇಕು.
ಈ ಕ್ಯಾಂಟಿನ್‌ನಲ್ಲಿ ಟಿಫೀನ್‌ಗೆ ಐದು ರೂ. ಹಾಗೂ ಊಟಕ್ಕೆ ಹತ್ತು ರೂ. ನಿಗದಿಪಡಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 500 ಟಿಫೀನ್, ಮಧ್ಯಾಹ್ನ ಹಾಗೂ ರಾತ್ರಿ ತಲಾ 500 ಊಟದ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.