Select Your Language

Notifications

webdunia
webdunia
webdunia
webdunia

ಮನೆಗಳ ಮಾಲೀಕರ ಪರ ನಿಂತ ಸಚಿವ : ಟ್ಯಾಕ್ಸ್ ಏರಿಕೆ ಕೈಬಿಡಲು ಡಿಸಿಗೆ ಸೂಚನೆ

ಮನೆಗಳ ಮಾಲೀಕರ ಪರ ನಿಂತ ಸಚಿವ : ಟ್ಯಾಕ್ಸ್ ಏರಿಕೆ ಕೈಬಿಡಲು ಡಿಸಿಗೆ ಸೂಚನೆ
ಕಾರವಾರ , ಗುರುವಾರ, 30 ಏಪ್ರಿಲ್ 2020 (16:12 IST)
ತೆರಿಗೆ ಪರಿಷ್ಕರಣೆ ಕೈಬಿಡುವಂತೆ ಜಿಲ್ಲಾಧಿಕಾರಿಗೆ ಸಚಿವರೊಬ್ಬರು ಸೂಚನೆ ಕೊಟ್ಟಿದ್ದಾರೆ.

ಕೊವಿಡ್-19 ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ ಪರಿಷ್ಕರಣೆಯನ್ನು ಕೈಬಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಶೇ. 30ರಷ್ಟು ತೆರಿಗೆ ಪರಿಷ್ಕರಿಸುವುದು ನಿರಂತರವಾಗಿ ನಡೆದು ಬಂದಿದೆ. ಅದರಂತೆ ಏಪ್ರಿಲ್ 1 ರಿಂದ ಉತ್ತರಕನ್ನಡವೂ ಸೇರಿದಂತೆ ಇಡೀ ರಾಜ್ಯದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ತೆರಿಗೆ ಪರಿಷ್ಕರಿಸುವ ಕ್ರಮ ಜಾರಿಯಾಗಿತ್ತು.

ಆದರೆ ಕೊವಿಡ್-19 ಮುಂಜಾಗೃತಾ ಕ್ರಮವಾಗಿ ಎಲ್ಲೆಡೆ ಲಾಕ್‌ಡೌನ್ ಘೋಷಿಸಲಾಗಿದೆ. ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಎಲ್ಲ ವರ್ಗದವರೂ ತೊಂದರೆಯಲ್ಲಿದ್ದಾರೆ.  ಹೀಗಾಗಿ ಸ್ಥಳೀಯ ಸಂಸ್ಥೆಗಳು ತೆರಿಗೆ ಪರಿಷ್ಕರಣೆಯನ್ನು ಮುಂದೂಡುವಂತೆ ಸಚಿವ ಹೆಬ್ಬಾರ್,  ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಅರಣ್ಯದಿಂದ ಹೊರಟಿತ್ತು ಲಕ್ಷಾಂತರ ಮೌಲ್ಯದ ಗೋವಾ ಮದ್ಯ’