ಮಡಿಕೇರಿ : ಪ್ರವಾಸಿಗರ ಸ್ವರ್ಗ, ಹಚ್ಚ ಹಸಿರ ಬೆಟ್ಟ ಗುಡ್ಡಗಳ ಸುಂದರ ಪ್ರಕೃತಿಯ ತವರು ಕೊಡಗಿನಲ್ಲಿ ಮೂರನೇ ಸಾಕಾನೆ ಶಿಬಿರ ಲೋಕಾರ್ಪಣೆಗೊಂಡಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ದುಬಾರೆ ಹಾಗೂ ಮತ್ತಿಗೋಡಿನಲ್ಲಿ ಸಾಕಾನೆ ಶಿಬಿರಗಳಿದ್ದವು. ಈ ಸಾಲಿಗೆ ಈಗ ಹಾರಂಗಿ ಸಾಕಾನೆ ಶಿಬಿರವೂ ಸೇರ್ಪಡೆಗೊಂಡಿದೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಬರೋಬ್ಬರಿ 32 ಸಾಕಾನೆಗಳಿತ್ತು. ಆದರೆ ಇಷ್ಟೊಂದು ಆನೆಗಳ ಒತ್ತಡ ತಡೆದುಕೊಳ್ಳಲು ಆ ಶಿಬಿರಕ್ಕೆ ಸಾಧ್ಯವಾಗುತ್ತಿರಲಿಲ್ಲ.
ಅಷ್ಟೇ ಅಲ್ಲದೇ ಸಾಕಾನೆ ಶಿಬಿರದಲ್ಲಿ ಇಂತಿಷ್ಟೇ ಆನೆಗಳಿರಬೇಕು ಎಂಬ ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸ ಸಾಕಾನೆ ಶಿಬಿರವನ್ನು ತೆರೆಯಲಾಗಿದೆ. ಈಗಾಗಲೇ ದುಬಾರೆಯಿಂದ 7 ಸಾಕಾನೆಗಳನ್ನು ಶಿಫ್ಟ್ ಮಾಡಲಾಗಿದೆ.