ಬೆಂಗಳೂರು : ಯೂರೋಪ್ನಲ್ಲಿ ಹೋಗಿ ನೆಲೆಸಲು ಅಗತ್ಯವಾದ ಹಣ ಸಂಪಾದನೆಗೆ ರಾಜಧಾನಿಯಲ್ಲಿ ಮನೆಗಳ ಕಿಟಕಿ ಸರಳು ಮುರಿದು ಕನ್ನ ಹಾಕುತ್ತಿದ್ದ,
ಕುಖ್ಯಾತ ಖದೀಮ ಹಾಗೂ ಆತನ ಸಹಚರನನ್ನು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಸಂಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ತೆಲಂಗಾಣದ ಹೈದರಾಬಾದ್ನ ನಾನಾವತ್ ವಿನೋದ್ ಕುಮಾರ್ ಅಲಿಯಾಸ್ ಶರೀಫ್ ಹಾಗೂ ಆತನ ಸಹಚರ ಪಶ್ಚಿಮ ಬಂಗಾಳದ ರೋಹಿತ್ ಮಂಡಲ್ ಬಂಧಿತರಾಗಿದ್ದು,
ಆರೋಪಿಗಳಿಂದ .79.64 ಲಕ್ಷ ಮೌಲ್ಯದ 792 ಗ್ರಾಂ ಚಿನ್ನ, .2 ಲಕ್ಷ ನಗದು, ದುಬಾರಿ ಮೌಲ್ಯದ 30 ವಾಚ್ಗಳು, 6 ಐ-ಪ್ಯಾಡ್ಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿಯಾಗಿವೆ. ಕೆಲ ತಿಂಗಳಿಂದ ಸಂಜಯನಗರ ವ್ಯಾಪ್ತಿಯಲ್ಲಿ ಕಿಟಕಿಯ ಗ್ರೀಲ್ಗಳನ್ನು ಕತ್ತರಿಸಿ ಕಳವು ಮಾಡುತ್ತಿದ್ದ ಸುಮಾರು 7 ಪ್ರಕರಣಗಳು ವರದಿಯಾಗಿದ್ದು.
ಈ ಸರಣಿ ಕಳ್ಳತನ ಹಿನ್ನೆಲೆಯಲ್ಲಿ ಎಚ್ಚೆತ್ತ ಇನ್ಸ್ಪೆಕ್ಟರ್ ಜಿ.ಬಾಲರಾಜ್, ಪಿಎಸ್ಐ ಗಿರೀಶ್ ನಾಯಕ್ ನೇತೃತ್ವದ ತಂಡವು, ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.