Publish Date: Tue, 30 May 2023 (15:14 IST)
Updated Date: Tue, 30 May 2023 (17:16 IST)
ಇಂದು ಆರೋಗ್ಯ ಇಲಾಖೆಯಲ್ಲಿ ಮಹತ್ವದ ಸಭೆ ನಡೆಯಲಿದೆ.ಆರೋಗ್ಯಾಧಿಕಾರಿಗಳ ಜತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಲಿದ್ದಾರೆ.ಕೋವಿಡ್ ಕಾಲದ ಹಗರಣಗಳ ತನಿಖೆಗೊಳಪಡಿಸುವ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆಯಾಗಲಿದೆ.ಈ ಹಿಂದೆ ಆಗಿರುವ ತೀರ್ಮಾನಗಳು,ಅದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟದ ಬಗ್ಗೆ ಚರ್ಚೆಯಾಗಲಿದೆ.ಕೋವಿಡ್ ನಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತದೆ.ಮಾಹಿತಿ ತೆಗೆದುಕೊಂಡು ನಂತರ ಪರಿಹಾರದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.ಸಚಿವರ ಸಮ್ಮುಖದಲ್ಲಿ ನಡೆಯೋ ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ರಣದೀಪ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಸಭೆ ಆರಂಭಕ್ಕೂ ಮುನ್ನ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.ಯಾವುದೇ ವಿಡಿಯೋ ಮಾಡೋದು, ಅದನ್ನ ವೈರಲ್ ಮಾಡೋದು, ಮಾಧ್ಯಮಗಳಿಗೆ ಕೊಡೋದುಇದನ್ನೆಲ್ಲಾ ಮಾಡಬೇಡಿ, ನನಗೆ ಎಲ್ಲಾ ಮಿಷನ್ ಫಂಕ್ಷನ್ ಗೊತ್ತಿದೆ.ಯಾರೇ ಆಗಿರಲಿ, ನನ್ನ ಟೀಂ ಆಗಿರಲಿ ಅಥವಾ ಅಧಿಕಾರಿಗಳಾಗಿರಲಿ,ಯಾರೂ ಹೀಗೆ ಮಾಡಬೇಡಿ.ಹೇ ಯಾರಾದ್ರೂ ವಿಡಿಯೋ ಮಾಡ್ತಾರಾ ಅಂತ ನೋಡಿ ಎಂದು ಗನ್ ಮ್ಯಾನ್ ಗಳಿಗೆ ಡಿಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ.