ಬೆಂಗಳೂರು : ಐಎಂಎ ಸಂಸ್ಥೆಯಿಂದ ಬಹುಕೋಟಿ ರೂ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಕ್ಕೆ ರಾಜಕಾರಣಿ, ಐಪಿಎಸ್ ಅಧಿಕಾರಿಗಳು ಯತ್ನ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
									
										
								
																	
ಈಗಾಗಲೇ ಸಿಬಿಐ ವಶದಲ್ಲಿರುವ ಮನ್ಸೂರ್ ಖಾನ್, ತಾನು ಹಣ ನೀಡಿದ್ದಕ್ಕೆ ಹಲವು ದಾಖಲೆಗಳನ್ನು ಇಟ್ಟಿದ್ದೆ. ಆ ದಾಖಲೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ ಎಂದು ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
									
			
			 
 			
 
 			
			                     
							
							
			        							
								
																	
ಇದನ್ನ ಜಾಲಾಡಲು ಸಿಬಿಐ, 12 ಜನರ ‘ಮಲ್ಟಿ ಡಿಸಿಪ್ಲಿನರಿ ಇನ್ವೆಸ್ಟಿಗೇಷನ್ ‘ ಎಂಬ ವಿಶೇಷ ತಂಡವನ್ನು ರಚಿಸಿದ್ದು, ಇದೀಗ ಈ ತಂಡ ಈ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.