Select Your Language

Notifications

webdunia
webdunia
webdunia
webdunia

ಅಕ್ರಮ ಚಂದನ ಮಾರಾಟಕ್ಕೆ ಯತ್ನ: ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ

Illegal Chandana sale: two thiefs arrest
bangalore , ಗುರುವಾರ, 5 ಆಗಸ್ಟ್ 2021 (20:44 IST)
ಅಕ್ರಮವಾಗಿ ರಕ್ತ ಚಂದನ ಮರದ ತುಂಡುಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. 
ಆಂಧ್ರಪ್ರದೇಶ ಮೂಲದ ಆನಂದ್‍ಕುಮಾರ್ (51), ತಮಿಳುನಾಡಿನ ಅನೀಲ್ ಸಿಂಘಿ (47) ಬಂಧಿತರು. ಆರೋಪಿಗಳಿಂದ 4.5 ಕೋಟಿ. ರೂ. ಮೌಲ್ಯದ 9.135 ಕೆ.ಜಿ. ರಕ್ತ ಚಂದನ ಮರದ ತುಂಡುಗಳು ಹಾಗೂ  ಕೃತ್ಯಕ್ಕೆ ಬಳಸಲಾಗುತ್ತಿದ್ದ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. 
ಹುಳಿಮಾವು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ರಕ್ತ ಚಂದನ ಮರದ ಶ್ಯಾಂಪಲ್ ತೋರಿಸಲು ಒಂದು ತುಂಡನ್ನು ತಂದು ಖರೀದಿದಾರರಿಗೆ ಕಾಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಆಧಾರಿಸಿ ಸಿಸಿಬಿ ಪೆÇಲೀಸರು ದಾಳಿ ನಡೆಸಿ, ಮಾಲು ಸಮೇತ ಆರೋಪಿಗಳನ್ನು ಬಂಧಿಸಿದರು.
ಆರೋಪಿಗಳು ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದಿಂದ ರಕ್ತಚಂದನ ಮರಗಳನ್ನು ಕಳ್ಳ ಸಾಗಾಣಿಕೆ ಮಾಡಿಕೊಂಡು ಬನ್ನೇರುಘಟ್ಟ ರಸ್ತೆಯ ಹೊಮ್ಮದೇವನಹಳ್ಳಿ ಮುಖ್ಯ ರಸ್ತೆ ಗೋಡನ್‍ನಲ್ಲಿ ದಾಸ್ತನು ಮಾಡಿದ್ದರು. ಈ ಮರಗಳನ್ನು ವಿದೇಶಗಳಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಖರೀದಿದಾರರಿಗೆ ಮರದ ಸ್ಯಾಂಪಲ್ ತೋರಿಸಲೆ ಒಂದು ತುಂಡನ್ನು ತಂದು ಖರೀದಿದಾರರಿಗೆ ಕಾಯುತ್ತಿದ್ದರು. ಈ ವೇಳೆ ಸಿಸಿಬಿ ಪೆÇಲೀಸರು ದಾಳಿ ನಡೆಸಿ ಬಂಧಿಸಿ ವಿಚಾರಣೆಗೊಳಪಡಿಸಿದರು. ಆಗ, ಅಕ್ರಮವಾಗಿ ರಕ್ತಚಂದನ ಮರಗಳನ್ನು ಸಂಗ್ರಹಿಸಿರುವ ಬಗ್ಗೆ ಬಾಯಿಬಿಟ್ಟಿದ್ದರು. ಆರೋಪಿಗಳ ಹೇಳಿಕೆ ಆಧಾರಿಸಿ ಗೋಡನ್ ಮೇಲೆ ದಾಳಿ ನಡೆಸಿ ಅಶೋಕ್ ಲೈಲ್ಯಾಂಡ್ ಲಾರಿಯಲ್ಲಿ ದಾಸ್ತನು ಮಾಡಿದ್ದ 4.5 ಕೋಟಿ ಮೌಲ್ಯದ 9135 ರಕ್ತಚಂದನ ಮರಗಳ ತುಂಡನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೆÇಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು. 
ಸದ್ಯ ಆರೋಪಿಗಳ ವಿರುದ್ಧ ಹುಳಿಮಾವು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಅಪರಾಧ ವಿಭಾಗದ ಜಂಟಿ ಪೆÇಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೆÇಲೀಸ್ ಆಯುಕ್ತ ಬಸವರಾಜ ಎಸ್. ಅಂಗಡಿ ಮಾರ್ಗದರ್ಶನದಲ್ಲಿ  ಸಿಸಿಬಿ ಸಂಘಟಿತ ಅಪರಾಧ ದಳ ವಿಭಾಗದ ಸಹಾಯಕ ಪೆÇಲೀಸ್ ಆಯುಕ್ತ ಎಚ್.ಎಸ್. ಪರಮೇಶ್ವರ್, ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

135 ದೇಶಗಳಿಗೆ ಹಬ್ಬಿದ ಡೆಲ್ಟಾ ವೈರಸ್: ಡಬ್ಲ್ಯೂಎಚ್ಒ